ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತವು ರಷ್ಯಾದ ಜೊತೆ ವಾಣಿಜ್ಯ ಸಂಬಂಧವನ್ನು ಮುಂದುವರಿಸಿದರೆ, ಆರ್ಥಿಕ ನಿರ್ಬಂಧ ಹೇರಬೇಕಾದೀತು ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು, ‘ಇಬ್ಬಂದಿತನ ಹೊಂದಿರಬಾರದು’ ಎಂದು ಎಚ್ಚರಿಸಿದೆ.
‘ನಾವು ಈ ವಿಚಾರವಾಗಿ ಬಂದಿರುವ ವರದಿಗಳನ್ನು ಗಮನಿಸಿದ್ದೇವೆ. ಬೆಳವಣಿಗೆಗಳನ್ನು ಅವಲೋಕಿಸುತ್ತಿದ್ದೇವೆ. ನಮ್ಮ ದೇಶದವರ ಇಂಧನ ಅಗತ್ಯಗಳನ್ನು ಪೂರೈಸುವುದು ನಮ್ಮ ಪಾಲಿಗೆ ಹೆಚ್ಚಿನ ಆದ್ಯತೆಯ ಸಂಗತಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
‘ಈ ಪ್ರಯತ್ನದಲ್ಲಿ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವುದರ ಆಧಾರದಲ್ಲಿ ಹಾಗೂ ಜಾಗತಿಕ ಸನ್ನಿವೇಶಗಳ ಆಧಾರದಲ್ಲಿ ಮುನ್ನಡೆಯುತ್ತೇವೆ. ಈ ವಿಚಾರದಲ್ಲಿ ಇಬ್ಬಂದಿತನ ಪ್ರದರ್ಶಿಸಬಾರದು ಎಂದು ಎಚ್ಚರಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.