ADVERTISEMENT

ಸುಂಕದ ಬಿಸಿ ರಷ್ಯಾಗೆ ತಟ್ಟಿತು: ‘ನ್ಯಾಟೊ‘ ಕಾರ್ಯದರ್ಶಿ ಹೇಳಿಕೆಗೆ ಭಾರತ ಖಂಡನೆ

ಪಿಟಿಐ
Published 26 ಸೆಪ್ಟೆಂಬರ್ 2025, 16:16 IST
Last Updated 26 ಸೆಪ್ಟೆಂಬರ್ 2025, 16:16 IST
<div class="paragraphs"><p>ಅಮೆರಿಕ-ಭಾರತ</p></div>

ಅಮೆರಿಕ-ಭಾರತ

   

(ಐಸ್ಟೋಕ್ ಚಿತ್ರ)

ನವದೆಹಲಿ: ‘ಭಾರತದ ಮೇಲೆ ಅಮೆರಿಕ ಹೇರಿದ ಶೇ 50ರಷ್ಟು ಸುಂಕದ ಬಿಸಿ ತಕ್ಷಣವೇ ರಷ್ಯಾಗೆ ತಟ್ಟಿತು. ಯಾಕೆಂದರೆ ಮೋದಿ ಅವರು  ಪುಟಿನ್‌ ಜತೆ  ದೂರವಾಣಿ ಕರೆಯಲ್ಲಿದ್ದರು. ‘ಅಮೆರಿಕ ನಮ್ಮ ಮೇಲೆ ಭಾರಿ ಸುಂಕ ಹೇರಿದೆ. ನಾನು ನಿಮ್ಮನ್ನು ಬೆಂಬಲಿಸುತ್ತೇನೆ. ಉಕ್ರೇನ್‌ ವಿರುದ್ಧದ  ಯುದ್ಧದ ವಿಚಾರಲ್ಲಿ ನಿಮ್ಮ ಕಾರ್ಯತಂತ್ರ ತಿಳಿಸಿ’ ಎಂದು ಮೋದಿ ಕೇಳಿದರು’ ಎಂಬ ‘ನ್ಯಾಟೊ’ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ್‌ ಅವರ ಹೇಳಿಕೆಯನ್ನು ಭಾರತ ಖಂಡಿಸಿದೆ.

ADVERTISEMENT

‘ಇದು ಆಧಾರ ರಹಿತ. ‘ನ್ಯಾಟೊ’ದ ಪ್ರಮುಖ ಹುದ್ದೆಯಲ್ಲಿ ಇರುವವರು ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡುವಾಗ ಇನ್ನಷ್ಟು ಎಚ್ಚರಿಕೆ ವಹಿಸಬೇಕು’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ.  

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಬಂದ ಮಾರ್ಕ್ ರೂಟ್‌  ‘ಸಿಎನ್‌ಎನ್‌’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.