ADVERTISEMENT

Covid India Update| ಕೋವಿಡ್‌ ಪ್ರಕರಣಗಳಲ್ಲಿ ಒಂದೇ ದಿನದಲ್ಲಿ ಶೇ 6.8 ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2022, 5:11 IST
Last Updated 3 ಫೆಬ್ರುವರಿ 2022, 5:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಓಮೈಕ್ರಾನ್‌ ಪ್ರೇರಿತ ಕೋವಿಡ್‌ ಮೂರನೇ ಅಲೆ ತಗ್ಗುತ್ತಿದೆ ಎಂಬ ವರದಿಗಳ ನಡುವೆಯೇ, ದೇಶದಲ್ಲಿ ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ ಶೇ.6.8ರಷ್ಟು ಹೆಚ್ಚಾಗಿವೆ.

ಬುಧವಾರ 1,61,386 ಪ್ರಕರಣಗಳು ವರದಿಯಾಗಿದ್ದವು. ಗುರುವಾರ 1,72,433 ಪ್ರಕರಣಗಳು ವರದಿಯಾಗಿವೆ. ಇನ್ನು ಇದೇ ಅವಧಿಯಲ್ಲಿ 1008 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 2,59,107 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 15,33,921 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 10.99 ಆಗಿದೆ.

ADVERTISEMENT

ಈ ವರೆಗೆ 167.87 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.