ADVERTISEMENT

Covid-19 India Update: ದೇಶದಲ್ಲಿ ಕಳೆದ 4 ತಿಂಗಳಲ್ಲೇ ಕನಿಷ್ಠ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2021, 4:54 IST
Last Updated 20 ಜುಲೈ 2021, 4:54 IST
ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಲು ಜಮ್ಮುವಿನ ಲಸಿಕಾ ಕೇಂದ್ರವೊಂದರಲ್ಲಿ ಸಾಲುಗಟ್ಟಿರುವ ಜನ– ಪಿಟಿಐ ಚಿತ್ರ
ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಲು ಜಮ್ಮುವಿನ ಲಸಿಕಾ ಕೇಂದ್ರವೊಂದರಲ್ಲಿ ಸಾಲುಗಟ್ಟಿರುವ ಜನ– ಪಿಟಿಐ ಚಿತ್ರ   

ನವದೆಹಲಿ: ಭಾರತದಲ್ಲಿ ಮಂಗಳವಾರ 24 ಗಂಟೆಗಳ ಅಂತರದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟ 30,093 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ನಾಲ್ಕು ತಿಂಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ಪ್ರಕರಣಗಳು ಇದಾಗಿದೆ.

24 ಗಂಟೆಗಳಲ್ಲಿ ಕೋವಿಡ್‌ ಕಾರಣಗಳಿಂದಾಗಿ 374 ಮಂದಿ ಮೃತಪಟ್ಟಿದ್ದಾರೆ ಹಾಗೂ 45,254 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ 4,06,130 ಪ್ರಕರಣಗಳು ಸಕ್ರಿಯವಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ.

ಒಟ್ಟು ಪ್ರಕರಣಗಳ ಸಂಖ್ಯೆ 3,11,74,322 ತಲುಪಿದ್ದು, ಈ ಪೈಕಿ 4,14,482 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 3,03,53,710 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ದೇಶದಲ್ಲಿ ಈವರೆಗೂ 41.18 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.