ನವದೆಹಲಿ: ದೇಶದಲ್ಲಿ ಕಳೆದ24 ಗಂಟೆಗಳಲ್ಲಿಕೋವಿಡ್ ದೃಢಪಟ್ಟ ಒಟ್ಟು 94,052 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸತತ ಮೂರನೇ ದಿನ ಒಂದು ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.
ಬುಧವಾರ ಒಂದೇದಿನ ಒಟ್ಟು 6,148 ಸೋಂಕಿತರು ಮೃತಪಟ್ಟಿದ್ದು, ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳುಬಿಹಾರದಲ್ಲೇ (3,971)ವರದಿಯಾಗಿವೆ.
ʼಸೋಂಕು ದೃಢಪ್ರಮಾಣ ಈ ವಾರ ಶೇ.5.43ರಷ್ಟಿದೆ. ಸೋಂಕು ದೃಢ ಪ್ರಮಾಣಬುಧವಾರ ಶೇ.4.69ರಷ್ಟಿದೆ. ಇದರೊಂದಿಗೆ ಸತತ17ನೇ ದಿನಸೋಂಕು ದೃಢ ಪ್ರಮಾಣ ಶೇ. 10ಕ್ಕಿಂತ ಕಡಿಮೆದಾಖಲಾಗಿದೆ. ಮಾತ್ರವಲ್ಲದೆ ನಿರಂತರವಾಗಿ28ನೇ ದಿನವೂ ಗುಣಮುಖರ ಸಂಖ್ಯೆ ಹೊಸ ಪ್ರಕರಣಗಳಿಗಿಂತ ಹೆಚ್ಚಾಗಿದೆʼ
ʼಕಳೆದ24 ಗಂಟೆಗಳಲ್ಲಿ ಒಟ್ಟು1,51,367 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.94.77ಕ್ಕೆ ಹೆಚ್ಚಾಗಿದೆʼ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ದೇಶದಲ್ಲಿ ಈವರೆಗೆ ಒಟ್ಟು2,91,83,121 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ2,76,55,493 ಮಂದಿ ಗುಣಮುಖರಾಗಿದ್ದಾರೆ. 3,59,676 ಸೋಂಕಿತರು ಮೃತಪಟ್ಟಿದ್ದು, ಇನ್ನೂ11,67,952 ಸಕ್ರಿಯ ಪ್ರಕರಣಗಳಿವೆ.ಇದುವರೆಗೆ ಒಟ್ಟು 23,90,58,360 ಡೋಸ್‌ನಷ್ಟು ಲಸಿಕೆ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.