ADVERTISEMENT

ಶ್ರೀಲಂಕಾಕ್ಕೆ ಭಾರತದಿಂದ ಮತ್ತೆ 40,000 ಟನ್‌ ಡೀಸೆಲ್‌ ರವಾನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 11:39 IST
Last Updated 31 ಮೇ 2022, 11:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಆರ್ಥಿಕ ಸಂಕಷ್ಟ ಮತ್ತು ಸಾಲದ ಸುಳಿಯಲ್ಲಿ ಸಿಲುಕಿ ಇಂಧನ ಕೊರತೆ ಎದುರಿಸುತ್ತಿರುವ ಶ್ರೀಲಂಕಾದ ಸಹಾಯಕ್ಕೆ ಭಾರತ ಮತ್ತೊಮ್ಮೆ ಧಾವಿಸಿದ್ದು, 40,000 ಟನ್‌ ಡೀಸೆಲ್‌ ಅನ್ನು ಸೋಮವಾರ ರವಾನಿಸಿದೆ ಎಂದು ಭಾರತದ ಹೈ ಕಮಿಷನ್‌ ಹೇಳಿದೆ.

ವಿದೇಶಿ ವಿನಿಯಮಕ್ಕೆ ಹಣ ಪಾವತಿಸಲಾಗದೆ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಕ್ಕೆ ಕಳೆದ ತಿಂಗಳು ಭಾರತ
₹ 3881 ಕೋಟಿ ಸಾಲವನ್ನು ಹೆಚ್ಚುವರಿಯಾಗಿ ನೀಡಿತ್ತು. ಮೇ 23 ರಂದು 40,000 ಟನ್‌ ಪೆಟ್ರೋಲ್‌ ಅನ್ನು ರವಾನಿಸಲಾಗಿತ್ತು. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭಾರತ 4 ಲಕ್ಷ ಟನ್‌ ವಿವಿಧ ಮಾದರಿಯ ಇಂಧನವನ್ನು ಕಳುಹಿಕೊಡಲಾಗಿತ್ತು.

₹ 3381 ಕೋಟಿ ಸಾಲ ಯೋಜನೆಯಡಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿಸಲು ಫೆಬ್ರುವರಿಯಲ್ಲಿ ಶ್ರೀಲಂಕಾ ಮತ್ತು ಭಾರತ ಸಹಿ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.