ADVERTISEMENT

‘ಅಗ್ನಿ ಪ್ರೈಮ್‌’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ
Published 21 ಅಕ್ಟೋಬರ್ 2022, 12:23 IST
Last Updated 21 ಅಕ್ಟೋಬರ್ 2022, 12:23 IST
   

ಬಾಲೇಶ್ವರ (ಒಡಿಶಾ): ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಹೊಸ ತಲೆಮಾರಿನ ‘ಅಗ್ನಿ ಪ್ರೈಮ್‌’ ಮಧ್ಯಮ ಶ್ರೇಣಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಶುಕ್ರವಾರ ಇಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮೂಲಗಳು ಹೇಳಿವೆ.

ಎಪಿಜೆ ಅಬ್ದುಲ್‌ ಕಲಾಂ ದ್ವೀಪದ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 9.45ಕ್ಕೆ ಕ್ಷಿಪಣೆಯನ್ನು ಉಡಾವಣೆ ಮಾಡಿ ಪರೀಕ್ಷಿಸಲಾಯಿತು ಎಂದು ತಿಳಿಸಿವೆ.

ಕ್ಷಿಪಣಿಯು ಸಾವಿರ ಕಿ.ಮೀ. ಮತ್ತು 2ಸಾವಿರ ಕಿ.ಮೀ. ನಡುವಿನ ಗುರಿಯನ್ನು ಭೇದಿಸಲಿದೆ ಎಂದೂ ವಿವರಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.