ADVERTISEMENT

ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತರಾಮನ್

ಪಿಟಿಐ
Published 4 ನವೆಂಬರ್ 2025, 16:14 IST
Last Updated 4 ನವೆಂಬರ್ 2025, 16:14 IST
   

ನವದೆಹಲಿ: ಭಾರತವು ಜಗತ್ತಿನಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಗಳವಾರ ಹೇಳಿದ್ದಾರೆ.

ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಡಿಎಸ್‌ಇ) ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಭಾರತವು ಹಣಕಾಸು ವಲಯದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಜನಸಂಖ್ಯೆ ಹಾಗೂ ಭೌಗೋಳಿಕ ವಿಭಿನ್ನತೆಯ ನಡುವೆಯೂ ದೇಶವು ಒಗ್ಗಟಿನಿಂದಿದೆ. 2014ರಲ್ಲಿ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತವು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಭಾರತೀಯರು ಅವರ ಬಗ್ಗೆ ಹಾಗೂ ದೇಶದ ಆರ್ಥಿಕತೆಯ ಬಗ್ಗೆ ನಂಬಿಕೆ ಹೊಂದಿರಬೇಕು. ಜನರ ಪ್ರಯತ್ನದಿಂದಲೇ ನಾವು ನಮ್ಮ ಗುರಿಯ ಕಡೆಗೆ ಸಾಗುತ್ತಿದ್ದೇವೆ. ನಿಮ್ಮ ಸಹಾಯದಿಂದಲೇ 2.5 ಕೋಟಿ ಜನರನ್ನು ಬಡತನದಿಂದ ಹೊರಬರುವಂತೆ ಮಾಡಿದ್ದೇವೆ. 140 ಕೋಟಿ ಜನಸಂಖ್ಯೆ ಇರುವ ದೇಶವನ್ನು ಸತ್ತ ಆರ್ಥಿಕತೆ ಎಂದು ಯಾರಾದರೂ ಬುದ್ದಿವಂತರು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ದೇಶದ ಬೆಳವಣಿಗೆಗೆ ತಂತ್ರಜ್ಞಾನವು ಕೂಡ ಮಹತ್ವದ ಕೊಡುಗೆ ನೀಡಿದೆ. ತಂತ್ರಜ್ಞಾನವು ಇರದಿದ್ದರೆ ಭೂಮಿ, ಕಾರ್ಮಿಕರು ಹಾಗೂ ಬಂಡವಾಳವು ತನ್ನ ಮೌಲ್ಯವನ್ನು ಕಳೆದುಕೊಳ್ಳುತಿತ್ತು. ಕೃತಕ ಬುದ್ದಿಮತ್ತೆಯು ಉದ್ಯೋಗವನ್ನು ಕಸಿದುಕೊಳ್ಳುತ್ತದೆ ಎಂದು ಕೆಲವರು ಭಯಪಡುತ್ತಿದ್ದಾರೆ, ಆದರೆ ಅದರಿಂದ ಉತ್ಪಾದನೆಯ ವೇಗ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.