ADVERTISEMENT

ಸೇನಾ ವೆಚ್ಚ; 3ನೇ ಸ್ಥಾನದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:21 IST
Last Updated 4 ಮೇ 2020, 2:21 IST
ಭಾರತೀಯ ಸೇನೆ ಸಾಂದರ್ಭಿಕ ಚಿತ್ರ
ಭಾರತೀಯ ಸೇನೆ ಸಾಂದರ್ಭಿಕ ಚಿತ್ರ   
""
""

ಭಾರತವು ಸೇನೆಗಾಗಿ 2019ರಲ್ಲಿ ಹೆಚ್ಚು ವೆಚ್ಚ ಮಾಡಿದ ಮೂರನೇ ರಾಷ್ಟ್ರ ಎನಿಸಿದೆ. 2010ಕ್ಕೆ ಹೋಲಿಸಿದರೆ, 2019ರಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಸೇನೆಗಾಗಿ ಮಾಡುವ ವೆಚ್ಚದಲ್ಲಿ ಶೇ 7.2ರಷ್ಟು ಏರಿಕೆ ಆಗಿದೆ. ಸೇನೆಗಾಗಿ ಅತಿ ಹೆಚ್ಚು ಮಾಡುವ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಬಾರತವು ಸ್ಥಾನ ಪಡೆದದ್ದು ಇದೇ ಮೊದಲು. ಆದರೆ, ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಸೇನೆಗೆ ಮಾಡುವ ವೆಚ್ಚದಲ್ಲಿ ಇಳಿಕೆಯಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ (ಸಿಪ್ರಿ) ವರದಿ ಮಾಡಿದೆ.

ಭಾರತ

* 2019ರಲ್ಲಿ ದಕ್ಷಿಣ ಏಷ್ಯಾದಲ್ಲಿ ಸೇನೆಗಾಗಿ ಹೆಚ್ಚು ವೆಚ್ಚ ಮಾಡಿದ ದೇಶ ಭಾರತ

ADVERTISEMENT

* 2018ರ ವೆಚ್ಚಕ್ಕೆ ಹೋಲಿಸಿದರೆ, 2019ರಲ್ಲಿ ವೆಚ್ಚವು ಶೇ 6.8ರಷ್ಟು ಏರಿಕೆ ಆಗಿದೆ

* 2010ರ ವೆಚ್ಚಕ್ಕೆ ಹೋಲಿಸಿದರೆ, 2019ರಲ್ಲಿ ವೆಚ್ಚವು ಶೇ 37ರಷ್ಟು ಏರಿಕೆ ಆಗಿದೆ

* 2010ರಲ್ಲಿ ಸೇನಾವೆಚ್ಚವು ಜಿಡಿಪಿಯ ಶೇ 2.7ರಷ್ಟು ಇತ್ತು. 2019ರಲ್ಲಿ ಸೇನಾವೆಚ್ಚವು ಜಿಡಿಪಿಯ ಶೇ 2.4ರಷ್ಟಕ್ಕೆ ಕುಸಿದಿದೆ

ಆಧಾರ: ಸಿಪ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.