ADVERTISEMENT

2025ರ ವೇಳೆಗೆ ಭಾರತ ಹಿಂದೂ ರಾಷ್ಟ್ರವಾಗಲಿದೆ: ಹಿಂದೂ ಜನಜಾಗೃತಿ ಸಮಿತಿ

ಅಖಿಲ ಭಾರತ ಹಿಂದೂ ಸಮ್ಮೇಳನದ ಸಂಘಟಕರ ಸುಳಿವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 16:08 IST
Last Updated 12 ಜೂನ್ 2022, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ:ದಕ್ಷಿಣ ಗೋವಾದ ದೇವಾಲಯ ಪಟ್ಟಣ ಪೋಂಡಾದಲ್ಲಿ ಭಾನುವಾರ ಉದ್ಘಾಟನೆಗೊಂಡ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಹಿಂದೂ ರಾಷ್ಟ್ರದ ರಚನೆಯ ಬೇಡಿಕೆಗೆ ಸಾಕ್ಷಿಯಾಯಿತು.

ಈ ಬೇಡಿಕೆ ಸಮಂಜಸವಾಗಿರುವುದರಿಂದ ಭಾರತದ ಸಂವಿಧಾನ ಅಡಿ ಅನುಮತಿ ನೀಡಲಾಗಿದೆ.2025 ರ ವೇಳೆಗೆ ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಘಟಕ ಡಾ.ಚಾರುದತ್ತ ಪಿಂಗಳೆ ಪ್ರತಿಪಾದಿಸಿದರು.

ಅಧಿವೇಶನ 7 ದಿನಗಳವರೆಗೆ ನಡೆಯಲಿದ್ದುದೇಶದಾದ್ಯಂತ ಸುಮಾರು 350 ಹಿಂದೂ ಸಂಘಟನೆಗಳಿಂದ ಸಾವಿರಕ್ಕೂ ಹೆಚ್ಚು ಜನರು ಹಾಗೂ ಯುಎಸ್ಎ, ಯುಕೆ, ಹಾಂಗ್ ಕಾಂಗ್, ಸಿಂಗಾಪುರ, ನೇಪಾಳದಿಂದ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಜ್ಞಾನವಾಪಿ ಮಸೀದಿ ವಿಷಯಗಳು, ಪೂಜಾ ಸ್ಥಳಗಳ ಕಾಯಿದೆ, ಕಾಶ್ಮೀರಿ ಹಿಂದೂಗಳು, ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ಹಿಜಾಬ್ ಆಂದೋಲನದ ಬಗ್ಗೆ ಚರ್ಚಿಸಲಾಗುವುದು ಎನ್ನಲಾಗಿದೆ.

ADVERTISEMENT

’ಶುಕ್ರವಾರದ ಪ್ರಾರ್ಥನೆಯ ನಂತರ ದೇಶಾದಾದ್ಯಂತ ಧಾರ್ಮಿಕ ಮತಾಂಧರು ನಡೆಸಿದ ಹಿಂಸಾಚಾರ ಪರಿಗಣಿಸಿ, ಇಡೀ ಆಡಳಿತ ವ್ಯವಸ್ಥೆ ಹಿಂದೂಗಳ ಹಿತಾಸಕ್ತಿಯಲ್ಲಿ ಉಳಿಯುವವರೆಗೆ ಹಿಂದೂ ರಾಷ್ಟ್ರಕ್ಕಾಗಿ ಹೋರಾಡಬೇಕಾಗುತ್ತದೆ'ಎಂದು ಪಿಂಗಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.