ADVERTISEMENT

ಹವಾಮಾನ ಅಪಾಯಗಳ ಬಹಿರಂಗ: ಬ್ಯಾಂಕುಗಳಿಗೆ ಶೀಘ್ರವೇ ನಿಯಮ

ಏಜೆನ್ಸೀಸ್
Published 18 ಜುಲೈ 2025, 15:59 IST
Last Updated 18 ಜುಲೈ 2025, 15:59 IST
   

ನವದೆಹಲಿ: ಹವಾಮಾನ ಬದಲಾವಣೆಯಿಂದ ಉಂಟಾಗುವ ಆರ್ಥಿಕ ಅಪಾಯಗಳನ್ನು ಬಹಿರಂಗಪಡಿಸಲು ಮತ್ತು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಮಗಳನ್ನು ಅಂತಿಗೊಳಿಸುವ ಹಂತದಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮೆರಿಕದಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಜೆ.ಪಿ.ಮಾರ್ಗನ್‌, ಸಿಟಿ ಬ್ಯಾಂಕ್‌, ಮಾರ್ಗನ್ ಸ್ಟಾನ್ಲಿ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ ಹಲವು ಪ‍್ರತಿಷ್ಠಿತ ಜಾಗತಿಕ ಬ್ಯಾಂಕುಗಳು ಹವಾಮಾನ ಬದ್ಧತೆಗಳನ್ನು ಕಡಿಮೆಗೊಳಿಸಲು ನಿರ್ಧರಿಸಿವೆ. ಅದರ ಬೆನ್ನಲ್ಲೇ ಆರ್‌ಬಿಐ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

2027ರ ಆರ್ಥಿಕ ವರ್ಷದಿಂದ ಈ ಕುರಿತು ಸ್ವಯಂ ಪ್ರೇರಿತವಾಗಿ ಬಹಿರಂಗಪಡಿಸಲು ಅವಕಾಶ ದೊರೆಯಲಿದ್ದು, 2028ರಿಂದ ಇದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.  

ADVERTISEMENT

ಪ್ರವಾಹ, ಬಿಸಿಗಾಳಿ, ಚಂಡಮಾರುಗಳಂತಹ ಪ್ರತಿಕೂಲ ಹವಾಮಾನಗಳು ಸಾಲಗರಾರರು ಮತ್ತು ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಅಳೆಯಲು ಆರ್‌ಬಿಐ ಸೂಚಿಸುವ ಸಾಧ್ಯತೆಯಿದೆ. ಈ ಸಂಬಂಧ ಶೀಘ್ರದಲ್ಲೇ ಅದು ಮಾರ್ಗಸೂಚಿ ಹೊರಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.