
ಪಿಟಿಐ
ನವದೆಹಲಿ: ಮುಂದಿನ 10 ವರ್ಷಗಳ ಅವಧಿಗೆ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಪಾಲುದಾರಿಕೆ ಸಾಧಿಸುವ ಚೌಕಟ್ಟು ರೂಪಿಸಿದ್ದು, ಈ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶುಕ್ರವಾರ ಅಂಕಿತ ಹಾಕಿವೆ.
ಕ್ವಾಲಾಲಂಪುರದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಸಚಿವ ಪೀಟರ್ ಹೆಗ್ಸೆತ್ ಅವರ ನಡುವೆ ನಡೆದ ಸಭೆಯಲ್ಲಿ ಒಪ್ಪಂದ ಏರ್ಪಟ್ಟಿದೆ.
‘ಈ ಒಪ್ಪಂದದ ಚೌಕಟ್ಟು ಎರಡೂ ದೇಶಗಳ ರಕ್ಷಣಾ ಪಾಲುದಾರಿಕೆಯನ್ನು ಇನ್ನಷ್ಟು ಸುಧಾರಿಸಲಿದೆ. ಪ್ರಾದೇಶಿಕ ಸ್ಥಿರತೆ ಮತ್ತು ಆಕ್ರಮಣ ತಡೆಗೆ ಮಹತ್ವದ ಅಡಿಪಾಯವಾಗಿದೆ. ನಮ್ಮ ರಕ್ಷಣಾ ಒಪ್ಪಂದಗಳು ಯಾವತ್ತೂ ಗಟ್ಟಿಯಾಗಿ ಉಳಿದಿಲ್ಲ. ಹೀಗಾಗಿ ಮಾಹಿತಿ ವಿನಿಮಯ, ತಾಂತ್ರಿಕ ಸಹಕಾರ ವಿಷಯದಲ್ಲಿ ಸಮನ್ವಯ ವೃದ್ಧಿಸಿಕೊಳ್ಳುತ್ತಿದ್ದೇವೆ’ ಎಂದು ಅಮೆರಿಕ ರಕ್ಷಣಾ ಸಚಿವ ಹೆಗ್ಸೆತ್ ಅವರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.