
ಭಾರತ–ಅಮೆರಿಕ
ನವದೆಹಲಿ: ‘ಪಾಕಿಸ್ತಾನದಲ್ಲಿ ನೆಲಸಿರುವ ಉಗ್ರ ಸಂಘಟನೆಗಳಾದ ಲಷ್ಕರ್–ಎ–ತಯಬಾ ಮತ್ತು ಜೈಶ್–ಎ–ಮೊಹಮ್ಮದ್, ಜೊತೆಗೆ ಇವುಗಳನ್ನು ಬೆಂಬಲಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಬ್ಯಾಂಕ್ ಖಾತೆಯನ್ನು ನಿಷ್ಕೃಯಗೊಳಿಸುವುದು ಮತ್ತು ಶಸ್ತ್ರಾಸ್ತ್ರ ಮಾರಾಟ ತಡೆ ಸೇರಿ ಇನ್ನೂ ಹೆಚ್ಚಿನ ದಂಡನೆ ವಿಧಿಸಬೇಕು’ ಎಂದು ಭಾರತ ಮತ್ತು ಅಮೆರಿಕವು ವಿಶ್ವ ಸಂಸ್ಥೆಯನ್ನು ಕೋರಿವೆ.
ನವದೆಹಲಿಯಲ್ಲಿ ಡಿ.3ರಂದು ಎರಡೂ ದೇಶಗಳ ‘ಜಂಟಿ ಕಾರ್ಯಾಚರಣೆ ಗುಂಪು’ ಸಭೆ ನಡೆಸಿ ಕೆಲವು ಆಗ್ರಹಗಳನ್ನು ವಿಶ್ವಸಂಸ್ಥೆಯ ಮುಂದಿಟ್ಟಿವೆ. ಜೊತೆಗೆ, ಭಯೋತ್ಪಾದನೆ ವಿರುದ್ಧ ಎರಡೂ ದೇಶಗಳು ಪರಸ್ಪರ ಸಹಕಾರ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಲಷ್ಕರ್–ಎ–ತಯಬಾ ಬೆಂಬಲಿತ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಅಮೆರಿಕದ ಗೃಹ ಇಲಾಖೆಯು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಇದಕ್ಕಾಗಿ ಭಾರತವು ಅಮೆರಿಕಕ್ಕೆ ಧನ್ಯವಾದ ತಿಳಿಸಿದೆ.
ಪಹಲ್ಗಾಮ್ ಮತ್ತು ಕೆಂಪು ಕೋಟೆಯಲ್ಲಿ ನಡೆದ ಉಗ್ರ ದಾಳಿಯನ್ನು ಸಭೆಯಲ್ಲಿ ಖಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.