ADVERTISEMENT

ಅಮೆರಿಕ ಜೊತೆಗಿನ ಒಪ್ಪಂದ ತ್ವರಿತಗೊಳಿಸುತ್ತೇವೆ: ಪೀಯೂಷ್‌ ಗೋಯಲ್

ಪಿಟಿಐ
Published 31 ಜನವರಿ 2026, 15:22 IST
Last Updated 31 ಜನವರಿ 2026, 15:22 IST
ಪೀಯೂಷ್‌ ಗೋಯಲ್
ಪೀಯೂಷ್‌ ಗೋಯಲ್   

‌‌ನವದೆಹಲಿ: ಅಮೆರಿಕ ಜೊತೆಗಿನ ಭಾರತದ ಮಹತ್ವದ ಒಪ್ಪಂದದ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್ ಅವರು ಶನಿವಾರ ತಿಳಿಸಿದರು.‌

‘ಭಾರತ–ಐರೋಪ್ಯ ಒಕ್ಕೂಟದ ಮಧ್ಯೆ ನಡೆದಿರುವ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತದಿಂದ ಯುರೋಪಿಗೆ ರಫ್ತಾಗುವ ಸರಕುಗಳ ಪ್ರಮಾಣ ದ್ವಿಗುಣಗೊಳ್ಳಲಿದೆ’ ಎಂದು ಸಂದರ್ಶನವೊಂದರಲ್ಲಿ ಗೋಯಲ್ ತಿಳಿಸಿದರು. 

ಒಪ್ಪಂದದ ಕುರಿತು ಮಾತುಕತೆ ಪೂರ್ಣಗೊಂಡಿದೆ ಎಂದು ಉಭಯ ಪಕ್ಷಗಳು ಘೋಷಿಸಿದ್ದು, ಈ ವರ್ಷವೇ ಜಾರಿಗೆ ಬರುವ ಸಾಧ್ಯತೆಯಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.