ರಾಜಸ್ಥಾನ: ಭಾರತದ ವಾಯು ಗಡಿಯನ್ನು ಪ್ರವೇಶಿಸಿದ ಜಾರ್ಜಿಯಾಸರಕು ಸಾಗಣೆ ವಿಮಾನವನ್ನು ಭಾರತೀಯ ವಾಯುಪಡೆ ಬಲವಂತವಾಗಿ ಇಳಿಸಿದೆ.
ಈ ವಿಮಾನಜಾರ್ಜಿಯಾದಿಂದ ಕರಾಚಿಗೆಬರುತ್ತಿದ್ದಎಎನ್-12 ಬೃಹತ್ ಕಾರ್ಗೋ ವಿಮಾನ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದೆ. ಕೂಡಲೇ ಇದನ್ನು ಗಮನಿಸಿದ ಭಾರತೀಯ ವಾಯುಪಡೆಯ ಜೆಟ್ ಯುದ್ಧ ವಿಮಾನಗಳು ಬಲವಂತವಾಗಿ ಜೈಪುರದ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
ಭಾರತೀಯ ವಾಯುಪಡೆಯ ರೇಡಿಯೊ ಕರೆಗಳನ್ನು ಸಿಬ್ಬಂದಿಗಳು ಸ್ವೀಕಾರ ಮಾಡಿಲ್ಲ ಹಾಗೂಮಾರ್ಗ ಬದಲಾವಣೆ ಮಾಡಿಕೊಂಡು 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಗಳನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.