ನವದೆಹಲಿ:ಉಕ್ರೇನ್‌ನಲ್ಲಿ ಸಿಲುಕಿರುವವರ ಪೈಕಿ 210 ಭಾರತೀಯರನ್ನು ವಿಶೇಷ ವಾಯುಪಡೆ ವಿಮಾನದ ಮೂಲಕ ಭಾನುವಾರ ಬೆಳಗ್ಗೆ ಕರೆತರಲಾಗಿದೆ.
ಇಲ್ಲಿನ ವಾಯುಪಡೆ ನಿಲ್ದಾಣಕ್ಕೆ ಬೆಳಗ್ಗೆ 5 ಗಂಟೆ ಸುಮಾರಿಗೆ ವಿಮಾನ ಆಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ 210 ಜನರು ಆಗಮಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಉಕ್ರೇನ್ ದೇಶದ ನೆರೆಯ ರಾಷ್ಟ್ರವಾದರೊಮೇನಿಯಾ ಮೂಲಕ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘3,000 ಭಾರತೀಯರನ್ನು 15 ವಿಮಾನಗಳ ಮೂಲಕ ಶನಿವಾರ ಕರೆತರಲಾಗಿದೆ. ಈ ಕಾರ್ಯಾ ಚರಣೆಗೆ 12 ವಿಶೇಷ ನಾಗರಿಕ ವಿಮಾನಗಳು ಹಾಗೂ ಮೂರು ವಾಯುಪಡೆ ವಿಮಾನಗಳನ್ನು ನಿಯೋಜಿಸಲಾಗಿತ್ತು.
ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ, ಉಕ್ರೇನ್ ಫೆ.24ರಿಂದ ತನ್ನ ವಾಯು ಪ್ರದೇಶ ಬಳಕೆಯನ್ನು ನಿರ್ಬಂಧಿಸಿದೆ. ಹೀಗಾಗಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಹಂಗೆರಿ ಹಾಗೂ ಸ್ಲೋವೇಕಿಯಾದ ಮಾರ್ಗವಾಗಿ ಕರೆತರಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.