ADVERTISEMENT

ಸಣ್ಣ ಉದ್ದಿಮೆಗಳ ಪುನಶ್ಚೇತನ ನೀತಿ ರೂಪಿಸಿ; ಭಾರತೀಯ–ಅಮೆರಿಕನ್ ಉದ್ದಿಮೆದಾರರ ಮನವಿ

ಪಿಟಿಐ
Published 29 ಅಕ್ಟೋಬರ್ 2020, 6:44 IST
Last Updated 29 ಅಕ್ಟೋಬರ್ 2020, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ಸಾಂಕ್ರಾಮಿಕದಿಂದ ತೀವ್ರವಾಗಿ ಕುಸಿತಕಂಡಿರುವ ಸಣ್ಣ ಉದ್ದಿಮೆದಾರರ ಪುನಶ್ಚೇತನಕ್ಕಾಗಿ ನೀತಿ ರೂಪಿಸುವ ಕುರಿತು ಚಿಂತಿಸುವಂತೆ ಭಾರತೀಯ – ಅಮೆರಿಕನ್‌ ಉದ್ದಿಮದಾರ ಸಮೂಹವೊಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಅವರನ್ನು ಕೇಳಿವೆ.

ಕೊರೊನಾ ಸಾಂಕ್ರಾಮಿಕ ರೋಗವು ದಿವಾಳಿಯ ಅಂಚಿನಲ್ಲಿರುವ ಉದ್ದಿಮೆಗಳನ್ನು ಆಹುತಿ ತೆಗೆದುಕೊಂಡಿದೆ ಎಂದು ಹೇಳಿರುವ ಉದ್ದಿಮೆದಾರರು, ಇಂಥ ಬಿಕ್ಕಟ್ಟಿನಿಂದ ಉದ್ದಿಮೆಗಳನ್ನು ರಕ್ಷಣೆಗಾಗಿ ಹಾಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸಮರ್ಪಕವಾಗಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ 19 ಸಾಂಕ್ರಾಮಿಕ ವಿಶ್ವದಾದ್ಯಂತ ಪ್ರತಿಯೊಬ್ಬರ ಮೇಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪರಿಣಾಮಬೀರಿದೆ. ಹೆಚ್ಚಿನ ಭಾರತೀಯ-ಅಮೆರಿಕನ್ ಸಣ್ಣ ವ್ಯಾಪಾರಸ್ಥರು ಕಡಿಮೆ ಆದಾಯ ಅಥವಾ ಆದಾಯವಿಲ್ಲದ ಕಾರಣ ಮೂಲಭೂತ ವೆಚ್ಚಗಳನ್ನು ಭರಿಸಲು ಪರದಾಡುತ್ತಿದ್ದಾರೆ‘ ಎಂದು ಎಂಸಿಐಎಸ್‌ ಮಲ್ಟಿಚಾಯ್ಸ್‌ ವಿಮಾ ಸೇವೆಗಳ ಕಂಪನಿಯ ಧರ್ಮೇಶ್ ವರ್ಮಾ ಹೇಳಿದ್ದಾರೆ.

ADVERTISEMENT

ಉದ್ದಿಮೆ ನಡೆಸಲು ಹೋರಾಟ ನಡೆಸುತ್ತಿರುವ ವರ್ಮಾ, ‘ಪ್ರತಿ ವ್ಯವಹಾರಕ್ಕೂ ಅನುದಾನಗಳು ಸಿಗುವಂತಗಾಬೇಕು. ಆ ಅನುದಾನವನ್ನು ಉದ್ದಿಮೆಗಳ ವೆಚ್ಚಕ್ಕೆ ಬಳಸುವಂತಿರಬೇಕು. ಜತೆಗೆ, ಅದನ್ನು ಮರುಪಾವತಿಸದಂತೆಯೂ ಇರಬೇಕು‘ ಎಂದು ಸಲಹೆ ನೀಡಿದ್ದಾರೆ.

‘ಆರ್ಥಿಕತೆ ಪುನಶ್ಚೇತನಗೊಳಿಸಿ, ಅಮೆರಿಕದ ಎಲ್ಲಾ ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಇದು ನಿರ್ಣಾಯಕ ಸಮಯ‘ ಎಂದಿರುವ ವರ್ಮಾ, ‘ಹಣಕಾಸಿನ ಒತ್ತಡದಿಂದಾಗಿ ವ್ಯವಹಾರಗಳು ಹೆಣಗಾಡುತ್ತಿವೆ ಮತ್ತು ಮುಚ್ಚುತ್ತಿವೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.