ADVERTISEMENT

ಕೌಶಿಕ್‌ ಬರುವಾಗೆ ಕಾಂಬೋಡಿಯಾದ ರಾಯಲ್‌ ಪದಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 11:58 IST
Last Updated 24 ಫೆಬ್ರುವರಿ 2021, 11:58 IST
ಕೌಶಿಕ್‌ ಬರುವ
ಕೌಶಿಕ್‌ ಬರುವ   

ಗುವಾಹಟಿ (ಪಿಟಿಐ): ಭಾರತೀಯ ಮೂಲದ ಕೌಶಿಕ್‌ ಬರುವಾ ಅವರಿಗೆ ಕಾಂಬೋಡಿಯಾ ದೇಶವು ವಿಶಿಷ್ಟ ಸೇವೆಗಾಗಿ ದೇಶದ ರಾಷ್ಟ್ರೀಯ ಗೌರವ ನೀಡಿದೆ.

ಅಸ್ಸಾಂನವರಾದ ಕೌಶಿಕ್‌ ಅವರು ಪ್ರಸ್ತುತ, ವಿಶ್ವಸಂಸ್ಥೆಯ ಕೃಷಿ ಅಭಿವೃದ್ಧಿ ಅಂತರರಾಷ್ಟ್ರೀಯ ನಿಧಿಯ (ಐಎಫ್‌ಎಡಿ) ಕಾಂಬೋಡಿಯಾ ಮತ್ತು ಲಾವೋಸ್‌ನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾಂಬೋಡಿಯನ್ ಸರ್ಕಾರವು ಬರುವಾ ಅವರಿಗೆ ರಾಯಲ್ ಆರ್ಡರ್ ಆಫ್ ಸಹಮೆತ್ರೆಯಡಿ ರಾಷ್ಟ್ರೀಯ ಪದಕ ನೀಡಿ ಗೌರವಿಸಿದೆ. ರಾಜ ಮತ್ತು ಕಾಂಬೋಡಿಯಾದ ಜನತೆಗೆ ವಿಶಿಷ್ಟ ಸೇವೆಗಳನ್ನು ನೀಡಿದ ವಿದೇಶಿಯರಿಗೆ ನೀಡಲಾಗುವ ಪದಕವಿದು ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್ ತಿಳಿಸಿದೆ.

ADVERTISEMENT

ಬರುವಾ ಅವರ ಸಹದ್ಯೋಗಿಯಾದ ಐಎಫ್‌ಎಡಿ ಕಾಂಬೋಡಿಯಾದ ಯೋಜನಾಧಿಕಾರಿ ಸಕ್‌ಫೌಸೆತ್ ಮೆಂಗ್ ಅವರಿಗೂ ರಾಯಲ್ ಆರ್ಡರ್ ಆಫ್ ಸೌತಾರಾ ಅಡಿಯಲ್ಲಿ ರಾಷ್ಟ್ರೀಯ ಪದಕ ನೀಡಲಾಗಿದೆ. ಐಎಫ್‌ಎಡಿಯು, ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿನ ಬಡತನ ಮತ್ತು ಹಸಿವು ನಿರ್ಮೂಲನೆಗಾಗಿ ಶ್ರಮಿಸುತ್ತಿದೆ.

ಕಾಂಬೋಡಿಯಾದಲ್ಲಿ ಸಣ್ಣ ಹಿಡುವಳಿದಾರರ ಕೃಷಿ ಅಭಿವೃದ್ಧಿ, ಬಡತನ ನಿರ್ಮೂಲನೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಈ ಇಬ್ಬರು ಅಧಿಕಾರಿಗಳು ನೀಡಿರುವ ಕೊಡುಗೆ ಪರಿಗಣಿಸಿ ಈ ಪದಕಗಳನ್ನು ನೀಡಲಾಗಿದೆ ಎಂದು ವೆಬ್‌ಸೈಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.