ADVERTISEMENT

ಸೆರೆಯಲ್ಲಿದ್ದ 16 ಭಾರತೀಯರು ಒಂಬತ್ತು ತಿಂಗಳ ಬಳಿಕ ದೇಶಕ್ಕೆ ವಾಪಸ್ಸು

ಪಿಟಿಐ
Published 11 ಜೂನ್ 2023, 14:14 IST
Last Updated 11 ಜೂನ್ 2023, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಟೋರಿಯಲ್‌ ಗಿನಿಯಾ ಮತ್ತು ನೈಜೀರಿಯ ವಶಕ್ಕೆ ತೆಗೆದುಕೊಂಡಿದ್ದ ಸರಕು ಸಾಗಣೆ ಹಡಗೊಂದರ ಭಾರತೀಯ ಸಿಬ್ಬಂದಿ (16 ಮಂದಿ) ಒಂಬತ್ತು ತಿಂಗಳ ಬಳಿಕ ಭಾರತಕ್ಕೆ ಮರಳಿದರು. 

ಮಾರ್ಷಲ್ ಐಲ್ಯಾಂಡ್ಸ್‌ಗೆ ಸೇರಿದ ತೈಲ ಟ್ಯಾಂಕರ್‌ ಎಂ.ಟಿ ಹಿರೋಯಿಕ್‌ ಇಡುನ್‌ ಮತ್ತು ಅದರ 26 ಸಿಬ್ಬಂದಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಸೆರೆಯಲ್ಲಿ ಇರಿಸಲಾಗಿತ್ತು . ಅವರಲ್ಲಿ ಒಂಬತ್ತು ಮಂದಿ ಭಾರತೀಯರಿದ್ದರು.

ಈಕ್ವಟೋರಿಯಲ್‌ ಗಿನಿಯಾ ಮತ್ತು ನೈಜೀರಿಯ ಆಡಳಿತಗಳ ಜೊತೆ ಭಾರತ ಸರ್ಕಾರ ಸುದೀರ್ಘ ಕಾಲದ ಸಂಧಾನ ನಡೆಸಿದ ಬಳಿಕ ಸಿಬ್ಬಂದಿಯ ಮೇಲಿದ್ದ ಎಲ್ಲಾ ಆರೋಪಗಳನ್ನು ಕೈಬಿಡಲಾಗಿದೆ ಮತ್ತು ದಂಡ ಕಟ್ಟಿಸಿಕೊಂಡು ಹಡಗನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸೆರೆಯಲ್ಲಿದ್ದ ಸಿಬ್ಬಂದಿಗೆ ಅವರ ಕುಟುಂಬದ ಜೊತೆ ಮಾತನಾಡಲು ಮತ್ತು ಆ ಎರಡು ದೇಶಗಳಲ್ಲಿಯ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ. 

ತೈಲ ಕಳುವು ಮಾಡಿದ ಆರೋಪದ ಮೇಲೆ ಎಂ.ಟಿ ಹೆರೋಯಿಕ್‌ ಇಡುನ್‌ ಹಡಗನ್ನು ನೈಜೀರಿಯ ನೌಕಾಪಡೆಯು ವಶಕ್ಕೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.