ADVERTISEMENT

ಐಸಿಸ್‌ನಿಂದ ತರಬೇತಿ ಹೊಂದಿದ್ದ ಕೇರಳದ ವ್ಯಕ್ತಿ ದೋಷಿ

ಎನ್‌ಐಎ ಕೊರ್ಟ್‌ನಿಂದ ತೀರ್ಪು: 28ರಂದು ಶಿಕ್ಷೆ ಪ್ರಮಾಣ ಪ್ರಕಟ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 11:27 IST
Last Updated 25 ಸೆಪ್ಟೆಂಬರ್ 2020, 11:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ:ಉಗ್ರ ಸಂಘಟನೆ ಐಸಿಸ್‌ನಿಂದ ತರಬೇತಿ ಪಡೆದಿದ್ದ ಕೇರಳ ಮೂಲದ ಸುಬಹನಿ ಹಜಾ ಮೊಯಿದೀನ್‌ ದೋಷಿ ಎಂದು ಎನ್‌ಐಎ ವಿಶೇಷ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

ಭಾರತ ಮತ್ತು ಇರಾಕ್‌ ವಿರುದ್ಧ ಯುದ್ಧ ಹೂಡಲು ಮೊಯಿದೀನ್‌ ಕ್ರಿಮಿನಲ್‌ ಸಂಚು ರೂಪಿಸಿದ್ದ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್‌, ಸೆ. 28ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಕೇರಳದ ಇಡುಕ್ಕಿ ಜಿಲ್ಲೆಯ ಮೊಯಿದೀನ್‌, 2015ರ ಏಪ್ರಿಲ್‌ನಲ್ಲಿ ಐಎಸ್‌ಐಎಸ್‌ ಸಂಘಟನೆ ಸೇರ್ಪಡೆಯಾಗಿದ್ದ. ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಅದೇ ವರ್ಷ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಇರಾಕ್‌ಗೆ ತೆರಳಿದ್ದ. ನಂತರ ಇರಾಕ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ.

ADVERTISEMENT

‘ಸಂಘಟನೆ ಬಗ್ಗೆ ತಿಳಿದಿತ್ತು ಹಾಗೂ ಉದ್ದೇಶಪೂರ್ವಕವಾಗಿಯೇ ಐಎಸ್‌ಐಎಸ್‌ಗೆ ಸೇರ್ಪಡೆಯಾದೆ. ಸಂಘಟನೆಯ ಸದಸ್ಯರೊಂದಿಗೆ ಸಂಪರ್ಕ ಬೆಳೆಸಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಟೆಲಿಗ್ರಾಮ್‌ನಂತಹ ವೇದಿಕೆಗಳನ್ನು ಭಾರತ ಮತ್ತು ಇರಾಕ್‌ ವಿರುದ್ಧ ಯುದ್ಧ ಸಾರುವ ಸಂಚು ರೂಪಿಸಲು ಬಳಸಿಕೊಂಡೆ’ ಎಂಬುದಾಗಿ ಮೊಯಿದೀನ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮೊಯಿದೀನ್‌ ಹೊಂದಿದ್ದ ಖಾತೆಗಳು ಹಾಗೂ ಇ–ಮೇಲ್‌ ಮೂಲಕ ವಿನಿಮಯ ಮಾಡಿಕೊಂಡಿದ್ದ ಮಾಹಿತಿಗಳನ್ನು ವಿಚಾರಣೆ ವೇಳೆ ಸಂಗ್ರಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.