ADVERTISEMENT

ಭಾರತೀಯ ನೌಕಾಪಡೆ ನೆರವು: ಅಪಹೃತ ಬಾಂಗ್ಲಾದೇಶ ಹಡಗಿನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 16:18 IST
Last Updated 15 ಮಾರ್ಚ್ 2024, 16:18 IST
-
-   

ನವದೆಹಲಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಬಾಂಗ್ಲದೇಶದ ಸರಕು ಸಾಗನೆ ಹಡಗಿನ ರಕ್ಷಣೆಗೆ ನಡೆದ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಹಾಗೂ ಗಸ್ತು ವಿಮಾನ ನೆರವು ನೀಡಿ, ಗಮನ ಸೆಳೆದಿವೆ.

ಹಿಂದೂಮಹಾಸಾಗರದಲ್ಲಿ ಈ ಹಡಗನ್ನು ಅಪಹರಣ ಮಾಡಲಾಗಿತ್ತು. ಈ ಕಡಲ ಪ್ರದೇಶದಲ್ಲಿ ಅಪಹೃತ ಹಡಗುಗಳ ರಕ್ಷಣೆಗೆ ಭಾರತೀಯ ನೌಕಾಪಡೆಯು ನೆರವಿನ ಹಸ್ತಚಾಚುತ್ತಿದ್ದು, ಈ ಕಾರ್ಯಾಚರಣೆ ತಾಜಾ ನಿದರ್ಶನವಾಗಿದೆ.

ಈ ಹಡಗು ರಕ್ಷಣೆಗೆ ನಡೆಸಿದ ಕಾರ್ಯಾಚರಣೆ ಕುರಿತು ಶುಕ್ರವಾರ ಮಾಹಿತಿ ನೀಡಿರುವ ನೌಕಾಪಡೆ, ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ (ಬಾಂಗ್ಲದೇಶ ಪ್ರಜೆಗಳು) ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ADVERTISEMENT

ಬಾಂಗ್ಲಾದೇಶಕ್ಕೆ ಸೇರಿದ ಹಡಗು ಮಾರ್ಚ್‌ 12ರಂದು ಅಪಹರಣಗೊಂಡಿತ್ತು. ಈ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ, ದೀರ್ಘ ವ್ಯಾಪ್ತಿ ಕಡಲ ಗಡಿ ಗಸ್ತು (ಎಲ್‌ಆರ್‌ಎಂಪಿ) ಯುದ್ಧನೌಕೆ ‘ಪಿ–8ಐ’ ಅನ್ನು ನಿಯೋಜಿಸಲಾಯಿತು. ಹಡಗು ಸೋಮಾಲಿಯಾ ಕಡಲ ಗಡಿ ತಲುಪುವವರೆಗೂ, ಅದರ ಸಮೀಪದಲ್ಲಿಯೇ ಸಾಗಿದ ಯುದ್ಧನೌಕೆ ಹಡಗಿನ ಸುರಕ್ಷತೆಯನ್ನು ಖಾತರಿಪಡಿಸಿತ್ತು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.