ಲೆಫ್ಟಿನೆಂಟ್ ಕಮಾಂಡರ್‌ಗಳಾದ ದಿಲ್ನಾ ಕೆ ಮತ್ತು ರೂಪಾ ಎ ಅವರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಂಭ್ರಮಿಸಿದರು
– ಪಿಟಿಐ ಚಿತ್ರ
ನವದೆಹಲಿ: ಐಎನ್‌ಎಸ್ ತಾರಿಣಿ ಯುದ್ಧನೌಕೆಯ ವಿಶ್ವ ಪರ್ಯಟನೆ ಅಂತಿಮ ಹಂತಕ್ಕೆ ತಲುಪಿದ್ದು, ನೌಕೆಯನ್ನು ಮುನ್ನಡೆಸಿದ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಸಂವಾದ ನಡೆಸಿದರು.
ಲೆಫ್ಟಿನೆಂಟ್ ಕಮಾಂಡರ್‌ಗಳಾದ ದಿಲ್ನಾ ಕೆ. ಮತ್ತು ರೂಪಾ ಎ. ಅವರ ಅನುಪಮ ಕೌಶಲ ಮತ್ತು ತಂಡದ ಉತ್ಸಾಹವನ್ನು ತ್ರಿಪಾಠಿ ಮಂಗಳವಾರ ಶ್ಲಾಘಿಸಿದರು.
ಈ ವಿಶ್ವ ಪರ್ಯಟನೆಗೆ ಕಳೆದ ವರ್ಷ ಅಕ್ಟೋಬರ್ 2ರಂದು ಗೋವಾದಲ್ಲಿ ನೌಕಾಪಡೆಯ ಮುಖ್ಯಸ್ಥರು ಹಸಿರು ನಿಶಾನೆ ತೋರಿದ್ದರು. ಎಂಟು ತಿಂಗಳ ಯಾತ್ರೆಯಲ್ಲಿ ಐಎನ್‌ಎಸ್ ತಾರಿಣಿಯು ಸತತ ಮಳೆ, ಗಾಳಿ ಮತ್ತು ಅಲೆಗಳ ಹೊಡೆತವನ್ನು ಲೆಕ್ಕಿಸದೆ ‘ಕೇಪ್ ಆಫ್ ಗುಡ್ ಹೋಪ್’ ಅನ್ನು ದಾಟಿದೆ.
‘ಕಳೆದ ಎಂಟು ತಿಂಗಳಲ್ಲಿ ನೌಕಾಪಡೆ ಮತ್ತು ದೇಶ ಹೆಮ್ಮೆ ಪಡುವಂತೆ ಮಾಡಿರುವಿರಿ. ಈ ಪ್ರಯಾಣ ಅಭೂತಪೂರ್ವವಾದದ್ದು, ನಿಮ್ಮನ್ನು ಸ್ವಾಗತಿಸಲು ನೌಕಾಪಡೆ ಕಾತರದಿಂದ ಕಾಯುತ್ತಿದೆ’ ಎಂದು ತ್ರಿಪಾಠಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.