ADVERTISEMENT

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ವಿಕ್ರಾಂತ್‌’ ಯುದ್ಧ ಹಡಗು ನೌಕಾಪಡೆಗೆ ಹಸ್ತಾಂತರ

ಪಿಟಿಐ
Published 28 ಜುಲೈ 2022, 14:18 IST
Last Updated 28 ಜುಲೈ 2022, 14:18 IST
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಯುದ್ಧವಿಮಾನಗಳ ನಿರ್ವಹಣೆಯ ‘ವಿಕ್ರಾಂತ್’ ಹಡಗನ್ನು ಕೊಚ್ಚಿಯಲ್ಲಿ ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಯುದ್ಧವಿಮಾನಗಳ ನಿರ್ವಹಣೆಯ ‘ವಿಕ್ರಾಂತ್’ ಹಡಗನ್ನು ಕೊಚ್ಚಿಯಲ್ಲಿ ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು   

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪ್ರಪ್ರಥಮ ಯುದ್ಧವಿಮಾನಗಳ ನಿರ್ವಹಣೆಯ ‘ವಿಕ್ರಾಂತ್’ ಹಡಗನ್ನು ಗುರುವಾರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ ಸಂಸ್ಥೆಯು ಸುಮಾರು ₹ 20 ಸಾವಿರ ಕೋಟಿ ವೆಚ್ಚದಲ್ಲಿ ವಿಕ್ರಾಂತ್‌ ಅನ್ನು ಅಭಿವೃದ್ಧಿಪಡಿಸಿದೆ. ಮೂರು ವಾರಗಳ ಹಿಂದೆ ಸಮುದ್ರದಲ್ಲಿ ಇದರ ಬಳಕೆಯ ನಾಲ್ಕನೇ ಮತ್ತು ಅಂತಿಮ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

ಈ ಮೂಲಕ ಭಾರತ ಯುದ್ಧವಿಮಾನಗಳ ನಿರ್ವಹಣೆಯ ಹಡಗನ್ನು ದೇಶೀಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸುವ ಆಯ್ದ ರಾಷ್ಟ್ರಗಳ ಸಮೂಹಕ್ಕೆ ಭಾರತವು ಸೇರ್ಪಡೆಯಾಯಿತು.ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶೀಯ ಯುದ್ಧವಿಮಾನಗಳ ವಾಹಕ (ಐಎಸಿ) ಸೇರ್ಪಡೆಯು ‘ಚಾರಿತ್ರಿಕ’ವಾದುದು ಎಂದು ನೌಕಾಪಡೆ ಬಣ್ಣಿಸಿದೆ.

ADVERTISEMENT

ಯುದ್ಧ ಹಡಗು ‘ವಿಕ್ರಾಂತ್‌’ ಮೂಲಕ ಮಿಗ್–29ಕೆ, ಕಾಮೊವ್–31 ಹೆಲಿಕಾಪ್ಟರ್‌, ಎಂಎಚ್–60ಆರ್‌ ಬಹುಪಯೋಗಿ ಹೆಲಿಕಾಪ್ಟರ್‌ಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಇದು, 2,300 ವಿಭಾಗಗಳನ್ನು ಹೊಂದಿದ್ದು, 1700 ಸಿಬ್ಬಂದಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಅಧಿಕಾರಿಗಳಿಗೂ ಪ್ರತ್ಯೇಕ ಕ್ಯಾಬಿನ್‌ ಅನ್ನು ವಿನ್ಯಾಸಗೊಳಿಸಲಾಗಿದೆ.262 ಮೀಟರ್‌ ಉದ್ದ, 62 ಮೀಟರ್‌ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.