ADVERTISEMENT

ಇನ್ನು ರೈಲಿನಲ್ಲೂ ಸಿಗಲಿದೆ ಮಸಾಜ್ ಸೌಲಭ್ಯ!

ತಲೆ ಮತ್ತು ಪಾದದ ಮಸಾಜ್‌ಗೆ ₹100 * 39ರೈಲುಗಳಲ್ಲಿ ಲಭ್ಯ

ಪಿಟಿಐ
Published 8 ಜೂನ್ 2019, 14:05 IST
Last Updated 8 ಜೂನ್ 2019, 14:05 IST
   

ನವದೆಹಲಿ: ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಮಸಾಜ್‌ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಡೆಹ್ರಾಡೂನ್‌– ಇಂದೋರ್‌ ಎಕ್ಸ್‌ಪ್ರೆಸ್‌, ನವದೆಹಲಿ– ಇಂದೋರ್ ಇಂಟರ್‌ ಸಿಟಿ ಮತ್ತು ಇಂದೋರ್– ಅಮೃತಸರ ಎಕ್ಸ್‌ಪ್ರೆಸ್‌ ಸೇರಿದಂತೆ ಇಂದೋರ್‌ನಿಂದ ಕಾರ್ಯಾಚರಣೆ ನಡೆಸುವ 39 ರೈಲುಗಳಲ್ಲಿ ಮಾತ್ರವೇ ಸದ್ಯ ಈ ಸೌಲಭ್ಯ ದೊರೆಯಲಿದೆ.

ಪಶ್ಚಿಮ ರೈಲ್ವೆ ವಲಯದ ರಟ್ಲಾಂ ವಿಭಾಗ ಇಂತಹ ಸೇವೆ ಆರಂಭಿಸಲು ಪ್ರಸ್ತಾವ ಸಲ್ಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಮಸಾಜ್ ಸೌಲಭ್ಯದಿಂದ ರೈಲ್ವೆಗೆ ಕೇವಲ ಆದಾಯವಲ್ಲದೆ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತದೆ. ಪ್ರತಿ ವರ್ಷ ರೈಲ್ವೆ ₹20 ಲಕ್ಷ ಹೆಚ್ಚುವರಿ ಆದಾಯ ಗಳಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಮಸಾಜ್ ಸೌಲಭ್ಯ ಇನ್ನು 15 ರಿಂದ 20 ದಿನಗಳಲ್ಲಿ ಆರಂಭವಾಗಲಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಇದು ದೊರೆಯಲಿದೆ. ತಲೆ ಮತ್ತು ಪಾದದ ಮಸಾಜ್‌ಗೆ ₹100 ನೀಡಬೇಕಾಗುತ್ತದೆ.

ಮೂರರಿಂದ ಐವರು ಮಸಾಜ್‌ ಮಾಡುವವರು ಪ್ರತಿ ರೈಲಿನಲ್ಲಿ ಇರುತ್ತಾರೆ. ರೈಲ್ವೆ ಇಲಾಖೆ ಅವರಿಗೆ ಗುರುತಿನ ಪತ್ರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.