ನವದೆಹಲಿ: ದೆಹಲಿ- ಮುಂಬೈ ಮತ್ತು ದೆಹಲಿ- ಹೌರಾ ನಡುವೆ ಸಂಚರಿಸುವ ರೈಲುಗಳ ವೇಗ ಗಂಟೆಗೆ 130 ಕಿಮೀ ಹೆಚ್ಚಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.
ಈ ಬಗ್ಗೆ ಮಾತನಾಡಿದ ರೈಲ್ವೆ ಮಂಡಳಿ (ಸಿಗ್ನಲ್ ಮತ್ತು ಟೆಲಿಕಾಂ) ಸದಸ್ಯ ಪ್ರದೀಪ್ ಕುಮಾರ್, ದೆಹಲಿ- ಹೌರಾ ಮತ್ತು ದೆಹಲಿ - ಮುಂಬೈಗೆ ಸಂಚರಿಸುವ ರೈಲು ಮಾರ್ಗಗಳು ಇದಕ್ಕೆ ಸಿದ್ಧವಾಗಿವೆ. ಈ ಮಾರ್ಗವಾಗಿ ಪ್ರಯಾಣಿಸುವ ರೈಲುಗಳು ಗಂಟೆಗೆ 130ಕಿಮೀ ವೇಗವಾಗಿ ಚಲಿಸಬಹುದಾಗಿದೆ. ಈ ಆರ್ಥಿಕ ವರ್ಷದಲ್ಲಿ ಈ ಎರಡೂ ಮಾರ್ಗಗಳಲ್ಲಿ ಚಲಿಸುವ ರೈಲುಗಳ ವೇಗ ವರ್ಧನೆಯಾಗಲಿದೆ.
ಮುಂಬರುವ ದಿನಗಳಲ್ಲಿ ಈ ಮಾರ್ಗವಾಗಿ ಸಂಚರಿಸುವ ರೈಲುಗಳ ವೇಗ ಗಂಟೆಗೆ 160 ಕಿಮೀ ಮಾಡುವ ಯೋಜನೆ ಇದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ ಪ್ರದೀಪ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.