ADVERTISEMENT

ಪಾಕ್‌ನ ಭಾರತೀಯ ವಿದ್ಯಾರ್ಥಿ ಸೇರಿ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಭಯೋತ್ಪಾದನೆಯಲ್ಲಿ ತೊಡಗಿದ ಆರೋಪ

​ಪ್ರಜಾವಾಣಿ ವಾರ್ತೆ
Published 3 ಮೇ 2022, 14:10 IST
Last Updated 3 ಮೇ 2022, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದಿಗೆ ಭಾರತೀಯ ಸೇನಾ ನೆಲೆಗಳ ರಹಸ್ಯ ಮಾಹಿತಿಗಳನ್ನು ರವಾನಿಸಿದ ಆರೋಪ ಕುರಿತು ಪಾಕಿಸ್ತಾನದ ಭಾರತೀಯ ವಿದ್ಯಾರ್ಥಿ ಹಾಗೂ ಆತನ ತಂದೆ ಸೇರಿ ಮೂವರ ವಿರುದ್ಧ ರಾಜ್ಯ ತನಿಖಾ ಸಂಸ್ಥೆಯು (ಎಸ್‌ಐಎ) ಆರೋಪ ಪಟ್ಟಿ ಸಲ್ಲಿಸಿದೆ.

‘ದೋಡಾದ ಕಷ್ಟಿಗಢ ನಿವಾಸಿ ಹಾಗೂ ಇಸ್ಲಾಮಾಬಾದ್‌ನ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಸಿಫ್‌ ಶಬೀರ್‌ ನಾಯಕ್‌ ಹಾಗೂ ಆತನ ತಂದೆ ಶಬೀರ್‌ ಹುಸೇನ್‌ ನಾಯಕ್‌ ಹಾಗೂ ಸಪ್ದಾರ್‌ ಹುಸೇನ್‌ ವಿರುದ್ಧ ಭಯೋತ್ಪಾದನ ವಿರೋಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಆರೋಪಪಟ್ಟಿ ಸಲ್ಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಇಸ್ಲಾಮಾಬಾದ್‌ನ ಇಸ್ಲಾಮಿಕ್ ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದಲ್ಲಿ ಆಸಿಫ್ ಶಬೀರ್ ನಾಯ್ಕ್‌ ಪ್ರವೇಶಾತಿ ಪಡೆದಿದ್ದು, ಆದರೆ ವಾಸ್ತವವಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆಯ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.ಉನ್ನತ ವ್ಯಾಸಂಗಕ್ಕೆ ಬರುವ ಭಾರತೀಯ ವಿದ್ಯಾರ್ಥಿಗಳನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.