ADVERTISEMENT

ಭಾರತೀಯ ಅಮೆರಿಕನ್‌ ಬಾಲಕಿಗೆ ಯುವ ವಿಜ್ಞಾನಿ ಹಿರಿಮೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 20:30 IST
Last Updated 19 ಅಕ್ಟೋಬರ್ 2020, 20:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹ್ಯೂಸ್ಟನ್: ಭಾರತೀಯ ಅಮೆರಿಕನ್‌ ಶಾಲಾ ಬಾಲಕಿ,14 ವರ್ಷದ ಅನಿಕಾ ಚೆಬ್ರೊಲು ಅವರು ₹18.75 ಲಕ್ಷ ಮೊತ್ತದ ‘3ಎಂ ಯುವ ವಿಜ್ಞಾನಿ’ ಸವಾಲನ್ನು ಗೆದ್ದಿದ್ದಾರೆ. ಅವರ ಆವಿಷ್ಕಾರವು ಕೋವಿಡ್‌ಗೆ ಸಂಭಾವ್ಯ ಚಿಕಿತ್ಸೆ ಆಗುವ ಸಾಧ್ಯತೆಯಿದೆ.

ಅನಿಕಾ ಅವರು ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ. 3ಎಂ ಯುವವಿಜ್ಞಾನಿ ಸವಾಲನ್ನು ಅಮೆರಿಕದ ಮಾಧ್ಯಮಿಕ ಶಾಲಾ ವಿಜ್ಞಾನದ ಪ್ರಮುಖ ಸ್ಪರ್ಧೆ ಎಂದು ಪರಿಗಣಿಸಲಾಗಿದೆ. ಕೋವಿಡ್‌ಗೆ ಔಷಧ ಕಂಡುಹಿಡಿಯಲು ಅನಿಕಾ ಅವರು ಇನ್‌ಸಿಲಿಕಾ ವಿಧಾನವನ್ನು ಬಳಸಿದ್ದಾರೆ.

ಅನಿಕಾ, ಕಳೆದ ವರ್ಷ ತೀವ್ರತರವಾದ ಇನ್‌ಫ್ಲುಯೆನ್ಜಾ ಸೋಂಕಿಗೆ ತುತ್ತಾಗಿದ್ದರು. ಇದಕ್ಕೆ ಔಷಧಿ ಕಂಡುಹಿಡಿಯಲು ನಿರ್ಧರಿಸಿದ್ದರು. ಅಷ್ಟರಲ್ಲಿ ಕೋವಿಡ್ ಅಡಿಯಿಟ್ಟಿತು. ಹೀಗಾಗಿ ಅವರು ಕೋವಿಡ್‌ಗೆ ಔಷಧಿ ಆವಿಷ್ಕರಿಸಲು ಮುಂದಾದರು. ‘ಔಷಧಿ ಅಭಿವೃದ್ಧಿ ಕೆಲಸಕ್ಕೆ 3ಎಂ ವಿಜ್ಞಾನಿಗಳ ಸಹಕಾರ ದೊರೆಯಬಹುದು ಎಂಬ ಉದ್ದೇಶದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ನನ್ನ ಔಷಧಿಯ ಇನ್‌–ವಿಟ್ರೊ ಮತ್ತು ಇನ್–ವಿವೊ ಪರೀಕ್ಷೆ ನಡೆಸಲು ಉದ್ದೇಶಿಸಿದ್ದೇನೆ’ ಎಂದು ಅನಿಕಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.