ADVERTISEMENT

ಮತದಾನದಲ್ಲಿ ಹಾಕುವ ಶಾಹಿ ಅಳಿಸುವುದು ಹೇಗೆ? ಅಂತರ್ಜಾಲದಲ್ಲಿ ಅತಿ ಹೆಚ್ಚು ತಡಕಾಟ!

ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:52 IST
Last Updated 12 ಏಪ್ರಿಲ್ 2019, 13:52 IST
ಮತದಾನ ಮಾಡಿರುವ ಹಿರಿಯ ಮಹಿಳೆ– ಸಾಂದರ್ಭಿಕ ಚಿತ್ರ
ಮತದಾನ ಮಾಡಿರುವ ಹಿರಿಯ ಮಹಿಳೆ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಮತದಾನದ ವೇಳೆ ಬೆರಳಿಗೆ ಹಾಕುತ್ತಾರಲ್ಲಾ, ಆ ಶಾಹಿಯನ್ನು ಅಳಿಸುವುದು ಹೇಗೆ?

ಇದೇನಪ್ಪ, ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರಷ್ಟೇ ಮುಗಿದಿದೆ. ಆಗಲೇ ಶಾಹಿ ಅಳಿಸುವ ಮಾತುಗಳಾ ಎಂದು ಅಚ್ಚರಿ ಪಡಬೇಡಿ.ಈ ಪ್ರಶ್ನೆಯನ್ನು ಕೇಳುತ್ತಿರುವುದು ನಾವಲ್ಲ, ನೆಟ್ಟಿಗರು.

ಹೌದು, ಸಾಕಷ್ಟು ನೆಟ್ಟಿಗರು ಗುರುವಾರ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಗೂಗಲ್‌ನಲ್ಲಿ ಶೋಧಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಮಂದಿ ಮತದಾನದ ನಂತರ ಬೆರಳಿಗೆ ಹಾಕುವ ಶಾಹಿಯನ್ನು ಅಳಿಸುವುದು ಹೇಗೆ ಎನ್ನುವುದನ್ನೇ ಹುಡುಕಿದ್ದಾರೆ.

ADVERTISEMENT

ಈ ಬಾರಿಯ ಲೋಕಸಭಾ ಚುನಾವಣೆ ದೇಶದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಗಲ್ಲಿಗಲ್ಲಿಗಳಲ್ಲಿಯೂ ರಾಜಕೀಯದ್ದೇ ಮಾತುಗಳು ಮಾರ್ದನಿಸುತ್ತಿವೆ. ಹೇಳಿಕೇಳಿ ಇದು ಅಂತರ್ಜಾಲ ಯುಗ. ಹೀಗಿದ್ದ ಮೇಲೆ ಅಲ್ಲಿಯೂ ಚುನಾವಣಾ ಚರ್ಚೆ ಕಾವೇರಿರುತ್ತದೆ.

ಗೂಗಲ್‌ಗೆಚುನಾವಣೆ ಕುರಿತ ಅತಿ ಹೆಚ್ಚುಪ್ರಶ್ನೆಗಳು ಗುರುವಾರ ಬಂದಿವೆ. ಶಾಹಿ ಕುರಿತ ಪ್ರಶ್ನೆಯ ಜೊತೆಗೆ ಇವಿಎಂ ಯಂತ್ರದ ಬಗ್ಗೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿರುವ ಬಗ್ಗೆ ಜನಶೋಧಿಸಿದ್ದಾರೆ.

ಈ ಬಾರಿ ಚುನಾವಣೆಯ ಮತದಾನದ ವೇಳೆ ತೋರು ಬೆರಳಿಗೆ ಹಾಕಿರುವ ಶಾಹಿ ಗುರುತು ಸುಲಭವಾಗಿ ಅಳಿಸಿಹೋಗುತ್ತಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡಿದ ನಂತರ, ಗುರುವಾರ ಮಧ್ಯಾಹ್ನದ ವೇಳೆ ಶಾಹಿಯನ್ನು ಅಳಿಸುವುದು ಹೇಗೆ ಎನ್ನುವ ಬಗ್ಗೆ ಹೆಚ್ಚು ಜನ ಹುಡುಕಿದ್ದಾರೆ.

ಒಂದು ವಿಷಯದ ಕುರಿತು ಹುಡುಕಾಟದ ಶೇಕಡಾವರು 100 ತಲುಪಿದರೆ ಅದನ್ನು ಅತ್ಯಧಿಕ ಶೋಧಗೊಂಡ ವಿಷಯ ಎಂದು ಗೂಗಲ್‌ ಪರಿಗಣಿಸುತ್ತದೆ. ಏಪ್ರಿಲ್‌ 11ರಂದು ಮಧ್ಯಾಹ್ನ 2.44ರಲ್ಲಿ ಶಾಹಿ ಅಳಿಸುವ ಕುರಿತ ಶೋಧಶೇ 100ಕ್ಕೆ ತಲುಪಿತ್ತು. 2:00 ರಿಂದ 7:00 ಗಂಟೆ ನಡುವೆಅದು ಶೇ 50ಕ್ಕಿಂತ ಹೆಚ್ಚಿದೆ.

ಆಂಧ್ರಪ್ರದೇಶದಲ್ಲಿ ಈ ಬಗ್ಗೆ ಅತಿ ಹೆಚ್ಚು ಶೋಧ ನಡೆಸಿದ್ದಾರೆ. ಉಳಿದಂತೆಕರ್ನಾಟಕ, ಉತ್ತರಖಂಡ, ತೆಲಂಗಾಣ, ದೆಹಲಿ, ಮಹಾರಾಷ್ಟ್ರದಲ್ಲಿ, ಅಸ್ಸಾಂಮತ್ತು ಒಡಿಶಾದಲ್ಲಿಶಾಹಿ ಕುರಿತು ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.