ADVERTISEMENT

India–Pakistan Tensions | ‘ಕಿರಾನಾ ಹಿಲ್ಸ್‌’ ಮೇಲೆ ದಾಳಿ ಮಾಡಿಲ್ಲ: ಐಎಎಫ್‌

ಪಿಟಿಐ
Published 12 ಮೇ 2025, 16:22 IST
Last Updated 12 ಮೇ 2025, 16:22 IST
ರಫೇಲ್‌ ಯುದ್ಧ ವಿಮಾನಗಳು 
ರಫೇಲ್‌ ಯುದ್ಧ ವಿಮಾನಗಳು    

ನವದೆಹಲಿ: ಪಾಕಿಸ್ತಾನದ ‘ಕಿರಾನಾ ಹಿಲ್ಸ್‌’ ಮೇಲೆ ದಾಳಿ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಭಾರತೀಯ ವಾಯುಪಡೆ (ಐಎಎಫ್‌) ಸೋಮವಾರ ಅಲ್ಲಗಳೆದಿದೆ. ವರದಿಯಾಗಿರುವ ಪ್ರಕಾರ ‘ಕಿರಾನಾ ಹಿಲ್ಸ್‌’ನಲ್ಲಿ ಅಣ್ವಸ್ತ್ರ ಸಂಗ್ರಹ ಸೌಲಭ್ಯವಿದೆ.

‘ಆಪರೇಷನ್‌ ಸಿಂಧೂರ’ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್‌ಮಾರ್ಷಲ್‌ ಎ.ಕೆ. ಭಾರ್ತಿ ಅವರು, ‘ಕಿರಾನಾ ಹಿಲ್ಸ್‌ನಲ್ಲಿ ಏನೇ ಇರಲಿ, ನಾವು ಅದರ ಮೇಲೆ ದಾಳಿ ನಡೆಸಿಲ್ಲ’  ಎಂದು ಸ್ಪಷ್ಟಪಡಿಸಿದರು.

ಭಾರತವು ಪಾಕ್‌ನ ಸರ್ಗೋಧಾ ವಾಯುನೆಲೆ ಮೇಲೆ ದಾಳಿ ಮಾಡಿದೆ ಮತ್ತು ಈ ನೆಲೆಯು ‘ಕಿರಾನಾ ಹಿಲ್ಸ್‌’ನಲ್ಲಿರುವ ಭೂಗತ ಪರಮಾಣು ಸಂಗ್ರಹಣಾ ಸೌಲಭ್ಯದ ಜತೆ ಸಂಪರ್ಕ ಹೊಂದಿದೆ ಎಂಬ ವರದಿಗಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.