ADVERTISEMENT

ದೇಶದ ಆರ್ಥಿಕತೆಯಲ್ಲಿ ತಲಾ ಆದಾಯ ಕುಸಿತ: ರಾಹುಲ್‌ ಗಾಂಧಿ ಆಕ್ಷೇಪ

ಪಿಟಿಐ
Published 6 ಜೂನ್ 2022, 12:22 IST
Last Updated 6 ಜೂನ್ 2022, 12:22 IST
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ   

ನವದೆಹಲಿ(ಪಿಟಿಐ): ದೇಶದ ಆರ್ಥಿಕತೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತೀಯರ ತಲಾ ಆದಾಯವು ಕಡಿಮೆಯಾಗುತ್ತಿದೆ. ಆದರೆ,ಕಾರ್ಯ ನೀತಿಯದಿವಾಳಿತಕ್ಕೆ ಸಿಲುಕಿರುವ ಸರ್ಕಾರದ ಬಳಿ ಸಮಸ್ಯೆಗಳಿಗೆ ಉತ್ತರವಿಲ್ಲ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಸೋಮವಾರ ಫೇಸ್‌ಬುಕ್ ಪೋಸ್ಟ್ ಮಾಡಿರುವ ಅವರು, ‘ಭಾರತದ ಕುಟುಂಬಗಳು ಈಗಾಗಲೇ ಹಣದುಬ್ಬರ, ಉದ್ಯೋಗ ನಷ್ಟ ಅನುಭವಿಸುತ್ತಿದ್ದು, ಅವರ ತಲಾ ಆದಾಯವು 2 ವರ್ಷದ ಹಿಂದಿನದ್ದಕ್ಕಿಂತಲೂ ಕುಸಿತವಾಗಿದೆ. ಭಾರತೀಯರ ತಲಾ ಆದಾಯವು ₹94,270ನಿಂದ₹91,481ಗೆ ಇಳಿಕೆಯಾಗಿದೆ.ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿಯು ಮತ್ತಷ್ಟು ಹದಗೆಡಲಿದೆ’ ಎಂದು ಎಚ್ಚರಿಕೆ ನೀಡಿದರು.

ಆಹಾರ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ವಾಗ್ದಾಳಿ ಮುಂದುವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.