ADVERTISEMENT

ಆಮ್ಲಜನಕ ಉತ್ಪಾದಿಸುವ ಕಾನ್ಸನ್‌ಟ್ರೇಟರ್‌ಗಳನ್ನು 5 ದೇಶಗಳಿಂದ ತಂದ ಇಂಡಿಗೊ

ಪಿಟಿಐ
Published 5 ಮೇ 2021, 8:35 IST
Last Updated 5 ಮೇ 2021, 8:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ:‘ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನಗಳು ಥಾಯ್ಲೆಂಡ್, ಚೀನಾ, ಕತಾರ್‌, ಹಾಂಕಾಂಗ್‌ ಮತ್ತು ಸಿಂಗಪುರದಿಂದ 2,717 ಆಮ್ಲಜನಕ ಉತ್ಪಾದಿಸುವ ಕಾನ್ಸನ್‌ಟ್ರೇಟರ್‌ಗಳನ್ನು ಭಾರತಕ್ಕೆ ಹೊತ್ತು ತಂದಿದೆ’ ಎಂದು ಸಂಸ್ಥೆಯು ಬುಧವಾರ ಹೇಳಿದೆ.

‘ಎರಡನೇ ಕೋವಿಡ್‌ ಅಲೆಯನ್ನು ಭಾರತ ಎದುರಿಸುತ್ತಿರುವ ಸಂದರ್ಭದಲ್ಲಿ ಇಂಡಿಗೊ ವಿಮಾನಗಳು 72,461 ಕೆ.ಜಿ ತೂಕದ ಒಟ್ಟು 4,142 ಆಮ್ಲಜನಕಉತ್ಪಾದಿಸುವ ಕಾನ್ಸನ್‌ಟ್ರೇಟರ್‌ಗಳನ್ನು ಸಾಗಿಸಿವೆ’ ಎಂದು ಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಥಾಯ್ಲೆಂಡ್, ಚೀನಾ, ಕತಾರ್‌, ಹಾಂಕಾಂಗ್‌ ಮತ್ತು ಸಿಂಗಪುರದಿಂದ ಆಮ್ಲಜನಕಉತ್ಪಾದಿಸುವ2,717 ಕಾನ್ಸನ್‌ಟ್ರೇಟರ್‌ಗಳನ್ನು ಮತ್ತು ದೇಶಿಯವಾಗಿ 1,425 ಆಮ್ಲಜನಕ ಉತ್ಪಾದಿಸುವ ಕಾನ್ಸನ್‌ಟ್ರೇಟರ್‌ಗಳನ್ನು ಇಂಡಿಗೊ ಸಾಗಿಸಿದೆ. ಜತೆಗೆ ಇತರೆ ವೈದ್ಯಕೀಯ ಉಪಕರಣಗಳನ್ನು ಸಾಗಿಸಲು ಕೂಡ ಸಂಸ್ಥೆ ನೆರವಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.