ADVERTISEMENT

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 17:05 IST
Last Updated 17 ಜನವರಿ 2026, 17:05 IST
<div class="paragraphs"><p>ಡಿಸೆಂಬರ್‌ನಲ್ಲಿ  ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ</p></div>

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

   

ನವದೆಹಲಿ: 2025ರ ಡಿಸೆಂಬರ್‌ನಲ್ಲಿ ಇಂಡಿಗೊ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಕಾರ್ಯಾಚರಣೆ ವೈಫಲ್ಯ ಕಾರಣ ಎನ್ನುವುದು ಪತ್ತೆಯಾದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಇಂಡಿಗೊ ಸಂಸ್ಥೆಗೆ ಶನಿವಾರ ₹22.20 ಕೋಟಿ ದಂಡ ವಿಧಿಸಿದೆ.

ಕಳೆದ ವರ್ಷದ ಡಿಸೆಂಬರ್‌ 3ರಿಂದ 5ರವರೆಗೆ ಇಂಡಿಗೊ ವಿಮಾನಗಳ ಸಂಚಾರದಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವು ವಿಮಾನಗಳ ಸಂಚಾರ ರದ್ದಾಗಿತ್ತು. 2,507 ವಿಮಾನಗಳ ರದ್ದು ಮತ್ತು 1,852 ವಿಮಾನಗಳ ವಿಳಂಬ ಆಗಿದೆ ಎಂದು ಇಂಡಿಗೊ ತಿಳಿಸಿತ್ತು. ಇದರಿಂದ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿದ್ದರು.

ADVERTISEMENT

ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶನದ ಮೇರೆಗೆ ಡಿಜಿಸಿಎ ನೇಮಿಸಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ಶುಲ್ಕ ವಿಧಿಸುವ ಕ್ರಮ ಜರುಗಿಸಲಾಗಿದೆ.

ಇಂಡಿಗೊ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಕ್ಕೆ ಕಾರಣವಾದ ಅಂಶಗಳ ಮೌಲ್ಯಮಾಪನವನ್ನು ಈ ಸಮಿತಿ ಮಾಡಿತ್ತು. ತನಿಖೆಯಲ್ಲಿ ಇಂಡಿಗೋ ಆಡಳಿತ ಮಂಡಳಿಯ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣ ವೈಫಲ್ಯಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ಡಿಜಿಸಿಎ ಕಠಿಣ ಕ್ರಮವನ್ನು ಜರುಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.