ADVERTISEMENT

‘ಇಂಡೊ–ಪೆಸಿಫಿಕ್‌ ಪರಿಕಲ್ಪನೆಯು ಅಧಿಕಾರ ವರ್ಗದ ನಿರಾಕರಣೆ'–ಎಸ್‌.ಜೈಶಂಕರ್‌

ಪಿಟಿಐ
Published 20 ನವೆಂಬರ್ 2020, 14:16 IST
Last Updated 20 ನವೆಂಬರ್ 2020, 14:16 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ನವದೆಹಲಿ: ಇಂಡೊ–ಪೆಸಿಫಿಕ್‌ ಪರಿಕಲ್ಪನೆಯು, ಅಧಿಕಾರ ವರ್ಗದ ನಿರಾಕರಣೆ ಹಾಗೂ ಕೆಲ ರಾಷ್ಟ್ರಗಳ ಲಾಭಕ್ಕಾಗಿ ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಲು ಸಾಧ್ಯವಿಲ್ಲ ಎನ್ನುವುದರ ಪುನರುಚ್ಚಾರ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಹೇಳಿದರು.

‘ದಿ ಇಂಡೊ–ಪೆಸಿಫಿಕ್‌ ಆ್ಯಂಡ್‌ ದಿ ಕೋವಿಡ್‌ ಕ್ರೈಸಿಸ್‌’ ಕಾರ್ಯಕ್ರಮದಲ್ಲಿ ‌ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಮಾತನಾಡಿದ ಜೈಶಂಕರ್‌, ‘ಇಂಡೊ ಪೆಸಿಫಿಕ್‌ ಎನ್ನುವುದು ಭವಿಷ್ಯದ ಗುರುತು’ ಎಂದರು. ಇಂಡೊ–ಪೆಸಿಫಿಕ್‌ ಭಾಗದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿರುವುದರ ಬೆನ್ನಲ್ಲೇ ಜೈಶಂಕರ್‌ ಅವರು ಈ ಹೇಳಿಕೆ ನೀಡಿದ್ದಾರೆ.

‘ಇಂಡೊ–ಪೆಸಿಫಿಕ್‌ ಕಲ್ಪನೆಗೆ ಇತ್ತೀಚೆಗೆ ಮನ್ನಣೆ ಹೆಚ್ಚುತ್ತಿದೆ. ಈ ಕಲ್ಪನೆಯ ಮೇಲೆ ಆಸಿಯಾನ್‌ ರಾಷ್ಟ್ರಗಳ ದೃಷ್ಟಿಕೋನವೂ ಗುರುತಿಸಬೇಕಾದ ಹೆಜ್ಜೆ. ಬೃಹತ್‌ ರಾಷ್ಟ್ರಗಳ ಜೊತೆ ಜರ್ಮನಿ, ಫ್ರಾನ್ಸ್‌, ನೆದರ್‌ಲ್ಯಾಂಡ್ಸ್‌ ಕೂಡಾ ಇತ್ತೀಚೆಗೆ ಈ ಪ್ರಸ್ತಾಪಕ್ಕೆ ಸಹಿ ಹಾಕಿವೆ. ಈ ಕಲ್ಪನೆಗೆ ಸೂಕ್ತವಾದ ರೂಪ ಕೊಡುವುದು, ಪ್ರಸ್ತುತ ಆಗಬೇಕಾದ ಕೆಲಸವಾಗಿದೆ. ಕ್ವಾಡ್‌ ರೀತಿಯಲ್ಲಿ ಎಲ್ಲ ರಾಷ್ಟ್ರಗಳ ರಾಜತಾಂತ್ರಿಕ ಚರ್ಚೆಯಿಂದಷ್ಟೇ ಇದು ಸಾಧ್ಯ’ ಎಂದು ಜೈಶಂಕರ್‌ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.