ADVERTISEMENT

ಪಾಂಗಾಂಗ್ ತ್ಸೊ ಸರೋವರದ ಬಳಿ ಐಟಿಬಿಪಿ ಯೋಧರಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಏಜೆನ್ಸೀಸ್
Published 15 ಆಗಸ್ಟ್ 2020, 7:54 IST
Last Updated 15 ಆಗಸ್ಟ್ 2020, 7:54 IST
ಚಿತ್ರ ಕೃಪೆ: ಎಎನ್‌ಐ
ಚಿತ್ರ ಕೃಪೆ: ಎಎನ್‌ಐ   

ಲೇಹ್: ಲಡಾಖ್‌ನ ಪಾಂಗಾಂಗ್ ತ್ಸೊ ಸರೋವರದ ದಂಡೆ ಬಳಿ ಐಟಿಬಿಪಿ (ಇಂಡೊ–ಟಿಬೆಟನ್ ಬಾರ್ಡರ್ ಪೊಲೀಸ್) ಯೋಧರು ಶನಿವಾರ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದರು.

ಗಡಿಯ ವಿವಿಧೆಡೆಗಳಲ್ಲಿ ಯೋಧರು ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾ ಕೀ ಜೈ, ‘ವಂದೇ ಮಾತರಂ’ ಘೋಷಣೆ ಕೂಗಿದರು.

ಚೀನಾ ಜತೆಗಿನ ಗಡಿ ಸಂಘರ್ಷದಿಂದಾಗಿ ಸದ್ಯ ಪಾಂಗಾಂಗ್ ತ್ಸೊ ಸರೋವರ ಪ್ರದೇಶ ಸುದ್ದಿಯಲ್ಲಿದೆ. ಗಾಲ್ವನ್ ಕಣಿವೆ ಪ್ರದೇಶದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ವೇಳೆ, ಪಾಂಗಾಂಗ್ ತ್ಸೊ ಭಾಗದಿಂದ ಭಾರತವು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಷರತ್ತು ವಿಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.