ADVERTISEMENT

ಇಂದೊರ್: ‘ಡ್ಯಾನ್ಸಿಂಗ್‌ ಕಾಪ್’ ಎಂದೇ ಹೆಸರಾಗಿದ್ದ ರಂಜಿತ್ ಸಿಂಗ್‌ಗೆ ಹಿಂಬಡ್ತಿ

ಪಿಟಿಐ
Published 31 ಜನವರಿ 2026, 14:38 IST
Last Updated 31 ಜನವರಿ 2026, 14:38 IST
<div class="paragraphs"><p>ರಂಜಿತ್‌ ಸಿಂಗ್‌</p></div>

ರಂಜಿತ್‌ ಸಿಂಗ್‌

   

(ಚಿತ್ರ ಕೃಪೆ–ಎಕ್ಸ್)

ಇಂದೋರ್‌ (ಮಧ್ಯಪ್ರದೇಶ): ‘ಡ್ಯಾನ್ಸಿಂಗ್‌ ಕಾಪ್‌’ ಎಂದೇ ಹೆಸರಾಗಿದ್ದ ಮಧ್ಯಪ್ರದೇಶದ ಇಂದೋರ್‌ನ ಹೆಡ್‌ ಕಾನ್‌ಸ್ಟೆಬಲ್‌ ರಂಜಿತ್‌ ಸಿಂಗ್‌ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶಿಸ್ತು ಪ್ರದರ್ಶಿಸುತ್ತಿದ ಆರೋಪದ ಕಾರಣಕ್ಕಾಗಿ ಕಾನ್‌ಸ್ಟೆಬಲ್‌ ಆಗಿ ಹಿಂಬಡ್ತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ADVERTISEMENT

ಸಿಂಗ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೊ ಮತ್ತು ವಿಡಿಯೊ ಅಶಿಸ್ತಿನಿಂದ ಕೂಡಿವೆ. ಹಾಗಾಗಿ ಅವರಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್‌ ಕಮಿಷನರ್‌ ರಾಜೇಶ್ ಡಂಡೋತಿಯಾ ತಿಳಿಸಿದ್ದಾರೆ.

ಅಲ್ಲದೇ, ಸಿಂಗ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಶ್ಲೀಲ ಸಂದೇಶ ಕಳುಹಿಸಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದರು. ಬಳಿಕ, ಅವರ ನಿಯೋಜನೆಯ ಸ್ಥಳ ಬದಲಾವಣೆ ಮಾಡಲಾಗಿತ್ತು. ಆರೋಪವನ್ನು ತಿರಸ್ಕರಿಸಿದ್ದ ಸಿಂಗ್‌, ಮಹಿಳೆ ವಿರುದ್ಧ ಮಾನನಷ್ಟ ಆರೋಪ ಮಾಡಿದ್ದರು. ಆ ಕುರಿತು ಇಲಾಖಾ ತನಿಖೆ ನಡೆಸುತ್ತಿದೆ ಎಂದು ಡಂಡೋತಿಯಾ ಹೇಳಿದರು.

ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಾಗ ‘ಮೂನ್‌ ವಾಕ್‌’ ನೃತ್ಯ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಿಂಗ್‌ ಜನಪ್ರಿಯರಾಗಿದ್ದರು.

ಟ್ರಾಫಿಕ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಸಿಂಗ್‌ 2021ರಲ್ಲಿ ಪ್ರಧಾನ ಕಚೇರಿಯ ಆದೇಶದ ಮೇರೆಗೆ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಬಡ್ತಿ ಪಡೆದಿದ್ದರು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.