ಕೊಲೆ
ಪ್ರಾತಿನಿಧಿಕ ಚಿತ್ರ
ಇಂದೋರ್: ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಂಗಡಿ ಮಾಲೀಕನನ್ನು ಇರಿದು ಕೊಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ. ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ನಗರದಲ್ಲಿ ಢಾಬಾ ನಡೆಸುತ್ತಿರುವ ಲೇಖ್‌ರಾಜ್ (25) ಕೊಲೆಯಾದ ವ್ಯಕ್ತಿ. ರಾಜ್ ಅಹಿರ್ವರ್ (19), ಪವನ್ ರಜಾಕ್ (20) ಮತ್ತು ಜಗದೀಶ್ ಸಿಯೋಡಿಯ (33) ಬಂಧಿತರು. ಭಾನುವಾರ ರಾತ್ರಿ ಆರೋಪಿಗಳು ಲೇಖರಾಜ್ ಅವರನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಮರೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.