ನವದೆಹಲಿ: ದೇಶದಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ (ಐಎಂಆರ್) ಗಣನೀಯ ಇಳಿಕೆ ದಾಖಲಾಗಿದೆ. 2013ಕ್ಕೆ ಹೋಲಿಸಿದರೆ 2023ರಲ್ಲಿ ಶಿಶುಗಳ ಮರಣ ಪ್ರಮಾಣವು ದಾಖಲೆಯ ಶೇ 37ರಷ್ಟು ಕಡಿಮೆಯಾಗಿದೆ.
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ 2023ರ ಮಾದರಿ ನೋಂದಣಿ ವರದಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಗುವಿನ ಪೈಕಿ ಮರಣ ಹೊಂದಿದ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಈ ದತ್ತಾಂಶ ನಿಗದಿಪಡಿಸಲಾಗುತ್ತದೆ.
2013ರಲ್ಲಿ ಶೇ 40ಕ್ಕೆ ತಲುಪಿದ್ದ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ ಶೇ 25ಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ, 1971ಕ್ಕೆ ಹೋಲಿಸಿದರೆ ಶಿಶುಗಳ ಮರಣಪ್ರಮಾಣವು 2023ರ ವೇಳೆಗೆ ಬರೋಬ್ಬರಿ ಶೇ 80ರಷ್ಟು ಇಳಿಕೆಯಾಗಿದೆ. 1971ರಲ್ಲಿ ಶಿಶುಗಳ ಮರಣ ಸಂಖ್ಯೆಯು 129 ಆಗಿತ್ತು ಎಂದೂ ವರದಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.