ADVERTISEMENT

ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲ, ದೇಶದಿಂದಲೇ ಹೊರಹಾಕುತ್ತೇವೆ: ಶಾ

ಪಿಟಿಐ
Published 21 ಫೆಬ್ರುವರಿ 2026, 10:56 IST
Last Updated 21 ಫೆಬ್ರುವರಿ 2026, 10:56 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಗುವಾಹಟಿ: ಭಾರತವು ನಕ್ಸಲರಿಂದ ಮುಕ್ತವಾಗಲು ಸಾಧ್ಯವಾದರೆ, ನುಸುಳುಕೋರರಿಂದಲೂ ಮುಕ್ತವಾಗಲು ಸಾಧ್ಯ ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲದೆ ದೇಶದಿಂದಲೇ ಹೊರಹಾಕುತ್ತೇವೆ ಎಂದು ಶನಿವಾರ ಹೇಳಿದ್ದಾರೆ.

ಅಸ್ಸಾಂ ಪೊಲೀಸ್‌ನ 10ನೇ ಬೆಟಾಲಿಯನ್‌ನ ಹೊಸ ಕ್ಯಾಂಪಸ್‌ಗೆ ಅಡಿಪಾಯ ಹಾಕಿದ ನಂತರ ಶಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನುಸುಳುಕೋರರ ಅತಿಕ್ರಮಣಗಳಿಂದ ಮುಕ್ತವಾದ ಭೂಮಿಯಲ್ಲಿ ಇದನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ADVERTISEMENT

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಶಾ, ನುಸುಳುಕೋರರನ್ನು ಓಡಿಸುವುದಾಗಿ ಈ ಹಿಂದೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ, ಅವರು ಆ ಕೆಲಸ ಮಾಡಲಿಲ್ಲ. ಏಕೆಂದರೆ, ನುಸುಳುಕೋರರು ಕಾಂಗ್ರೆಸ್‌ನ ವೋಟ್‌ಬ್ಯಾಂಕ್ ಎಂದು ಕುಟುಕಿದರು.

ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ತೆಗೆದರೆ ಸಾಕಾಗುವುದಿಲ್ಲ. ಅವರನ್ನು ದೇಶದಿಂದಲೇ ಹೊರಹಾಕಬೇಕು ಎಂದಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಅಸ್ಸಾಂ, ಪೂರ್ವ ಮತ್ತು ಈಶಾನ್ಯ ಭಾರತದ ಕೈಗಾರಿಕಾ ಹಬ್ ಆಗಲಿದೆ ಎಂದಿದ್ಧಾರೆ.

ಈ ವರ್ಷದ ಮಾರ್ಚ್–ಏಪ್ರಿಲ್ ತಿಂಗಳಿನಲ್ಲಿ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.