ADVERTISEMENT

ಆಧಾರ್‌ ಮಾಹಿತಿ ಆಧರಿತ ಇ–ಪ್ಯಾನ್‌ ತಿಂಗಳಲ್ಲೇ ಜಾರಿ

ಪಿಟಿಐ
Published 6 ಫೆಬ್ರುವರಿ 2020, 19:45 IST
Last Updated 6 ಫೆಬ್ರುವರಿ 2020, 19:45 IST
   

ನವದೆಹಲಿ: ‘ಆಧಾರ್‌ ಮಾಹಿತಿಯ ಆಧರಿಸಿ ಆನ್‌ಲೈನ್‌ ಮೂಲಕ ತಕ್ಷಣವೇ ಪ್ಯಾನ್‌ಕಾರ್ಡ್‌ ವಿತರಿಸುವ ವ್ಯವಸ್ಥೆ ಇದೇ ತಿಂಗಳಿನಲ್ಲಿ ಜಾರಿಗೆ ಬರಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

ಪ್ಯಾನ್‌ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಅದರಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಜಿ ನಮೂನೆಯಲ್ಲಿ ವಿಸ್ತೃತ ಮಾಹಿತಿ ತುಂಬಿ ಅದನ್ನು ಇಲಾಖೆ ಗೆ ಸಲ್ಲಿಸುವ ರಗಳೆ ತಪ್ಪಲಿದೆ. ತೆರಿಗೆ ಇಲಾಖೆಗೆ ತೆರಿಗೆ ಪಾವತಿದಾರರ ಮನೆ ವಿಳಾಸಕ್ಕೆ ಪ್ಯಾನ್‌ ತಲುಪಿಸುವ ಸಮಸ್ಯೆಯೂ ಇರುವುದಿಲ್ಲ.

ಪಡೆಯುವುದು ಹೇಗೆ?: ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಆಧಾರ್‌ ಸಂಖ್ಯೆ ನೀಡಿದರೆ, ಆಧಾರ್‌ಗೆ ಜೋಡಣೆ ಆಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಅದು ಖಾತರಿಯಾದ ಕೆಲವೇ ಸೆಕೆಂಡ್‌ಗಳಲ್ಲಿ ಇ–ಪ್ಯಾನ್‌ ಸಿದ್ಧವಾಗುತ್ತದೆ. ಇದನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.