ADVERTISEMENT

ಅಂತರರಾಷ್ಟ್ರೀಯ ಯೋಗದಿನ | ದೇಹ–ಮನಸಿನ ನಡುವಣ ಸಾಮರಸ್ಯದ ಮಾಧ್ಯಮ ಯೋಗ: ಅಮಿತ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2020, 2:30 IST
Last Updated 21 ಜೂನ್ 2020, 2:30 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಯೋಗವು ದೇಹ ಮತ್ತು ಮನಸಿನ ನಡುವಣ ಸಾಮರಸ್ಯದ ಮಾಧ್ಯಮ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಯೋಗವು ದೇಹ–ಮನಸು, ಕ್ರಿಯೆ–ಆಲೋಚನೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮಾರಸ್ಯ ಸಾಧಿಸುವ ಕೊಂಡಿಯಾಗಿದೆ. ಯೋಗವು ಇಡೀ ಮಾನವ ಕುಲಕ್ಕೆ ಭಾರತೀಯ ಸಂಸ್ಕೃತಿ ನೀಡಿರುವ ಅತ್ಯಮೂಲ್ಯ ಉಡುಗೊರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಯೋಗವನ್ನು ಜಾಗತಿಕ ಮಟ್ಟದಲ್ಲಿ ಜನ ಸ್ವೀಕರಿಸುವಂತಾಗಿದೆ’ ಎಂದು ಶಾ ಉಲ್ಲೇಖಿಸಿದ್ದಾರೆ.

ಯೋಗ ದಿನಾಚರಣೆ ಕುರಿತ ಇನ್ನಷ್ಟು ಸುದ್ದಿ, ಲೇಖನ, ವಿಡಿಯೊಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/international-yoga-day

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.