ADVERTISEMENT

ಚಿತ್ರೋತ್ಸವಕ್ಕೆ ಇಂದು ತೆರೆ

ಪ್ರೇಮಕುಮಾರ್ ಹರಿಯಬ್ಬೆ
Published 27 ನವೆಂಬರ್ 2019, 19:45 IST
Last Updated 27 ನವೆಂಬರ್ 2019, 19:45 IST

ಪಣಜಿ: ಕಳೆದ ಒಂದು ವಾರದಿಂದ ಇಲ್ಲಿ ನಡೆಯುತ್ತಿರುವ ಭಾರತದ ಐವತ್ತನೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ತೆರೆ ಬೀಳಲಿದೆ. ಸಂಜೆ ಪಣಜಿ ಹೊರವಲಯದ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.

ಸಮಾರಂಭದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳಲ್ಲದೆ, ಚಿತ್ರೋತ್ಸವದ ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಬಹುಮಾನ ಪಡೆಯಲಿರುವ ಚಲನ ಚಿತ್ರ ನಿರ್ದೇಶಕರು ಮತ್ತು ನಟ, ನಟಿಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವಿದೆ. ಸಂಜೆ 7 ಗಂಟೆಗೆ ಪಣಜಿಯ ಕಲಾ ಅಕಾಡೆಮಿಯಲ್ಲಿ ಮೊಹಸೆನ್ ಮಖ್ಮಲ್ಬಫ್ ನಿರ್ದೇಶನದ ಇಟಾಲಿಯನ್‌ ಚಿತ್ರ ‘ಮಾರ್ಗೆ ಅಂಡ್ ಹರ್ ಮದರ್‌’ ಪ್ರದರ್ಶನಗೊಂಡು ಚಿತ್ರೋತ್ಸವ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT