ADVERTISEMENT

ಶಾಲೆಯಲ್ಲಿ ಯೋಗ ಕಡ್ಡಾಯಕ್ಕೆ ಪ್ರಸ್ತಾವ

ಪಿಟಿಐ
Published 10 ಜೂನ್ 2019, 18:41 IST
Last Updated 10 ಜೂನ್ 2019, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ: ಯೋಗ ಶಿಕ್ಷಣವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾವವನ್ನು ಆಯುಷ್‌ ಸಚಿವಾಲಯವು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿದೆ ಎಂದು ಕೇಂದ್ರ ಆಯುಷ್‌ ಸಚಿವ ಶ್ರೀಪಾದ ನಾಯಕ್‌ ಸೋಮವಾರ ಹೇಳಿದ್ದಾರೆ.

‘ದೈಹಿಕ ಶಿಕ್ಷಣದಲ್ಲಿ ಯೋಗ ಶಿಕ್ಷಣವನ್ನು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸುವ ವಿಚಾರವನ್ನು ಈ ಪ್ರಸ್ತಾವವು ಹೊಂದಿದೆ. ಎಷ್ಟುಸಾಧ್ಯವೋ ಅಷ್ಟು ಬೇಗ ಪ್ರಸ್ತಾವ ಅಂಗೀಕಾರ ಆಗಬೇಕು ಎಂಬುದು ನಮ್ಮ ನಿರೀಕ್ಷೆ. 2010–21ರ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಬೇಕು’ ಎಂದು ಅವರು ತಿಳಿಸಿದ್ದಾರೆ.

ಇದೇ 21ರಂದು ಆಚರಿಸಲಾಗುವ ಅಂತರ ರಾಷ್ಟ್ರೀಯ ಯೋಗದಿನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡ ಲಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ಈ ಬಾರಿಯ ಮುಖ್ಯ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸುವ ದೇಶಗಳ ಸಂಖ್ಯೆ 200 ಎಂದು ನಾಯಕ್‌ ತಿಳಿಸಿ ದ್ದಾರೆ. ಕಳೆದ ವರ್ಷ 177 ದೇಶಗಳಲ್ಲಿ ಯೋಗ ದಿನ ಆಚರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.