ADVERTISEMENT

ಮಹಾರಾಷ್ಟ್ರದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯಿಸಿ: ಬಿಜೆಪಿ ಶಾಸಕ ಲೋಧಾ

ಪಿಟಿಐ
Published 22 ಮಾರ್ಚ್ 2022, 12:57 IST
Last Updated 22 ಮಾರ್ಚ್ 2022, 12:57 IST
ಮಂಗಲ್‌ ಲೋಧಾ
ಮಂಗಲ್‌ ಲೋಧಾ   

ಮುಂಬೈ: ಮಹಾರಾಷ್ಟ್ರದ ಶಿವಸೇನಾ ನೇತೃತ್ವದ ಸರ್ಕಾರವು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಒಂದು ಅಧ್ಯಾಯವನ್ನು ಪರಿಚಯಿಸಬೇಕು ಎಂದು ಬಿಜೆಪಿ ಶಾಸಕ ಮಂಗಲ್‌ ಪ್ರಭಾತ್‌ ಲೋಧಾಮಂಗಳವಾರ ಬೇಡಿಕೆಯಿಟ್ಟಿದ್ದಾರೆ.

ಇದೊಂದು ಧಾರ್ಮಿಕ ಗ್ರಂಥ ಮಾತ್ರವಲ್ಲ, ಬದಲಿಗೆ ಜೀವನದ ಸಾರವನ್ನು ತಿಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ‘ಭಾರತದಾದ್ಯಂತ ಶಾಲಾ ಶಿಕ್ಷಣದಲ್ಲಿ ಗೀತೆಯನ್ನು ಅಳವಡಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ಗೀತೆಯನ್ನು ಪರಿಚಯಿಸುತ್ತದೆಯೇ? ಸರ್ಕಾರವು ಗೀತೆಯ ಒಂದು ಅಧ್ಯಾಯವನ್ನಾದರೂ ಶಿಕ್ಷಣದಲ್ಲಿ ಅಳವಡಿಸಲು ನಾನು ಮನವಿ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ಮಹಾರಾಷ್ಟ್ರದ ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು. ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದೇನೆ’ ಎಂದು ಲೋಧಾ ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ನಲ್ಲಿ 2022–23ರ ಶೈಕ್ಷಣಿಕ ಸಾಲಿನಿಂದ ಭಗವದ್ಗೀತೆಯು 6–12ನೇ ತರಗತಿಯ ಪಠ್ಯಕ್ರಮದ ಭಾಗವಾಗಲಿದೆ ಎಂದು ಇಲ್ಲಿಯ ಬಿಜೆಪಿ ನೇತೃತ್ವದ ಸರ್ಕಾರ ಗುರುವಾರ ಘೋಷಿಸಿದೆ.ಕರ್ನಾಟಕ ಸರ್ಕಾರದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.