ಗಡಿ ಬಳಿ ಯೋಧರು
ಸಾಂದರ್ಭಿಕ ಚಿತ್ರ –ಪಿಟಿಐ
ಅಹಮದಾಬಾದ್: ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಒಳನುಸುಳುಕೋರನೊಬ್ಬನನ್ನು ಬನಾಸ್‌ಕಾಂಠಾ ಜಿಲ್ಲೆಯ ಗಡಿಯಲ್ಲೇ ಹತ್ಯೆ ಮಾಡಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ತಿಳಿಸಿದೆ.
ಗುಜರಾತ್‌ನ ಗಡಿಯಲ್ಲಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ ಒಳನುಸುಳುಕೋರನಿಗೆ ಬಿಎಸ್‌ಎಫ್ ಶುಕ್ರವಾರ ರಾತ್ರಿ ಎಚ್ಚರಿಕೆ ನೀಡಿತು. ಇದನ್ನು ಪರಿಗಣಿಸದ ಆತ, ಯೋಧರತ್ತ ಗುಂಡು ಹಾರಿಸಲು ಮುಂದಾದ. ತಕ್ಷಣವೇ ಭದ್ರತಾ ಪಡೆಗಳು ಗುಂಡಿನ ಮಳೆಗರೆದವು. ಅತಿಕ್ರಮ ಪ್ರವೇಶಕ್ಕೆ ಮುಂದಾಗಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಿದೆ.
ಬನಾಸ್‌ಕಾಂಠಾ ಜಿಲ್ಲೆಯು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.