ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲನೆ ಆದೇಶ ಕಾಯ್ದಿರಿಸಿದ ಕೋರ್ಟ್‌

ಪಿಟಿಐ
Published 27 ಆಗಸ್ಟ್ 2021, 11:53 IST
Last Updated 27 ಆಗಸ್ಟ್ 2021, 11:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಎನ್‌ಎಕ್ಸ್‌ಮೀಡಿಯಾ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ದಾಖಲೆಗಳನ್ನು ಪರಿಶೀಲಿಸಲು ಆರೋಪಿಗೆ ಅವಕಾಶ ನೀಡಲಾಗದು ಎಂದು ದೆಹಲಿ ಹೈಕೋರ್ಟ್‌ ಎದುರು ಸಿಬಿಐ ಪ್ರತಿಪಾದಿಸಿತು.

ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಅವರ ಪುತ್ರ ಕಾರ್ತಿ ಈ ಪ್ರಕರಣದ ಆರೋಪಿಗಳು. ಇವರು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇರುವ ಕಾರಣ ಪರಿಶೀಲನೆಗೆ ಅವಕಾಶ ನೀಡಲಾಗದು ಎಂದೂ ಸಿಬಿಐ ತಿಳಿಸಿತು.

ದಾಖಲೆಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದ ಕೆಳಹಂತದ ಕೋರ್ಟ್‌ನ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರು, ‘ಪರಿಶೀಲನೆ ಕುರಿತ ಅಂಶವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಆರೋಪಿಯ ಪರವಾಗಿ ಇತ್ಯರ್ಥಪಡಿಸಿದೆ’ ಎಂದು ಹೇಳಿದರು.

ADVERTISEMENT

ಹೆಚ್ಚಿನ ಹೊಣೆಯನ್ನು ಆರೋಪಿಗೆ ಹೊರಿಸಲಾಗಿದೆ. ಕಾಯ್ದೆಯು ಮುಂದಡಿ ಇರಿಸಬೇಕಾಗಿದೆ. ಪ್ರತಿ ತನಿಖಾ ಸಂಸ್ಥೆಯು ಸಾವಿರಾರು ದಾಖಲೆಗಳನ್ನು ಜಪ್ತಿ ಮಾಡಲಿದೆ. 500 ದಾಖಲೆಗಳನ್ನು ಉಳಿಸಿ, ಉಳಿದಿದ್ದನ್ನು ಬದಿಗಿರಿಸಲಿದೆ. ಅವುಗಳು ನಿಮ್ಮ ಆಸ್ತಿಯಲ್ಲ. ಅವು ಆರೋಪಿಗೆ ಬೇಕಾದ್ದು ಇರಬಹುದು ಎಂದು ನ್ಯಾಯಮೂರ್ತಿ ತಿಳಿಸಿದರು.

ಸಿಬಿಐ ಅರ್ಜಿ ಕುರಿತ ಆದೇಶವನ್ನು ಕೋರ್ಟ್ ಕಾಯ್ದಿರಿಸಿದ್ದು, ಈ ಸಂಬಂಧ ಲಿಖಿತ ಪ್ರತಿಕ್ರಿಯೆ ದಾಖಲಿಸುವಂತೆ ಸಿಬಿಐ ಮತ್ತು ಆರೋಪಿ ಇಬ್ಬರಿಗೂ ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.