ADVERTISEMENT

ರಂಜಾನ್ ವೇಳೆ ಮನೆಯಲ್ಲೇ ಪ್ರಾರ್ಥನೆ ಮಾಡಿ: ಇಸ್ಲಾಮಿಕ್ ಸೆಂಟರ್ ಆಫ್‌ ಇಂಡಿಯಾ ಮನವಿ

ಏಜೆನ್ಸೀಸ್
Published 22 ಏಪ್ರಿಲ್ 2020, 10:28 IST
Last Updated 22 ಏಪ್ರಿಲ್ 2020, 10:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕೊರೊನಾ ವೈರಸ್‌ ಸೋಂಕಿನ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ರಂಜಾನ್ ಪ್ರಾರ್ಥನೆ ಮಾಡುವಂತೆ ಇಸ್ಲಾಮಿಕ್ ಸೆಂಟರ್ ಆಫ್‌ ಇಂಡಿಯಾ ಮನವಿ ಮಾಡಿದೆ.

ಲಾಕ್‌ಡೌನ್ ನಿಯಮಗಳನ್ನು ಪಾಲಿಸುವಂತೆ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಇಸ್ಲಾಮಿಕ್ ಸೆಂಟರ್ ಪ್ರಕಟಣೆಯನ್ನೂ ಹೊರಡಿಸಿದೆ. ಪ್ರಾರ್ಥನೆ ಮಾಡುವ ವೇಳೆ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದೆ.

ಬಹುತೇಕ ಏಪ್ರಿಲ್ 25ರಿಂದ ರಂಜಾನ್ ಆರಂಭವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.