ADVERTISEMENT

ಇಸ್ಲಾಮಿಕ್‌ ವಿದ್ವಾಂಸ ಮೌಲಾನಾ ವಹಿದುದ್ದೀನ್‌ ಖಾನ್‌ ನಿಧನ

ಪಿಟಿಐ
Published 22 ಏಪ್ರಿಲ್ 2021, 7:16 IST
Last Updated 22 ಏಪ್ರಿಲ್ 2021, 7:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪದ್ಮವಿಭೂಷಣ ಪುರಸ್ಕೃತ ಹಿರಿಯ ಇಸ್ಲಾಮಿಕ್‌ ವಿದ್ವಾಂಸ ಮೌಲಾನಾ ವಹಿದುದ್ದೀನ್‌ ಖಾನ್‌(96) ಬುಧವಾರ ರಾತ್ರಿ ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಈಚೆಗೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು.

ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರವು ಅವರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರಕಟಿಸಿತ್ತು. 2000ನೇ ಇಸವಿಯಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು.

ರಾಷ್ಟ್ರಪತಿ ರಮಾನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಅವರು ಮೌಲಾನಾ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.