ನವದೆಹಲಿ: ‘ಫಾಲ್ಕನ್ 9’ ರಾಕೆಟ್‌ನಲ್ಲಿನ ದ್ರವ್ಯ ಆಮ್ಲಜನಕ ಸೋರಿಕೆ ವಿಷಯವನ್ನು ಸ್ಪೇಸ್‌ಎಕ್ಸ್ ಲಘುವಾಗಿ ತೆಗದುಕೊಂಡಿತ್ತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳ ಜೀವವನ್ನು ಅಪಾಯಕ್ಕೆ ತಳ್ಳಿತ್ತು ಎಂದು ಇಸ್ರೊ ಮುಖ್ಯಸ್ಥ ವಿ. ನಾರಾಯಣ್ ಗುರುವಾರ ತಿಳಿಸಿದ್ದಾರೆ.
ಇಸ್ರೊ ಎಂಜಿನಿಯರ್‌ಗಳ ಒತ್ತಾಯದ ಮೇರೆಗೆ ಪರಿಶೀಲನೆ ನಡೆಸಿದಾಗ ಸ್ಪೇಸ್‌ಎಕ್ಸ್ ರಾಕೆಟ್ ಎಂಜಿನ್‌ಗಳಿಗೆ ದ್ರವ ಆಮ್ಲಜನಕವನ್ನು ಸಾಗಿಸುವ ಆಕ್ಸಿಡೈಸರ್ ಲೈನ್‌ಗಳಲ್ಲಿ ಸೋರಿಕೆಯಾಗುತ್ತಿರುವುದು ಮತ್ತು ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು ಎಂದು ನಾರಾಯಣ್ ತಿಳಿಸಿದ್ದಾರೆ.
‘ಬಿರುಕಿನೊಂದಿಗೆ ರಾಕೆಟ್ ಉಡಾವಣೆಯಾಗಿದ್ದರೆ ಕಂಪನಗಳೊಂದಿಗೆ ಅದು ಮೇಲಕ್ಕೇರುವಾಗಲೇ ದಾರಿ ತಪ್ಪುವ ಆತಂಕವಿತ್ತು. ಹಾಗೆ ಆಗಿದ್ದಿದ್ದರೆ ತಪ್ಪಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು’ ಎಂದು ನಾರಾಯಣ್ ತಿಳಿಸಿದ್ದಾರೆ.
‘ಬಿರುಕನ್ನು ಕಂಡು ಸ್ಪೇಸ್‌ಎಕ್ಸ್ ಆಶ್ಚರ್ಯಪಟ್ಟಿತ್ತು. ಅಂತಿಮವಾಗಿ ಎಲ್ಲವನ್ನೂ ಸರಿಪಡಿಸಲಾಗಿತ್ತು. ಈ ವಿಷಯವನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂಡರು. ದ್ರವ್ಯ ಆಮ್ಲಜನಕ ಚಾಲಿತ ಎಂಜಿನ್ ಮೇಲೆ ಕೆಲಸ ಮಾಡುತ್ತಿರುವ ಇಸ್ರೊ ಇದನ್ನು ಸಂಪೂರ್ಣ ಸರಿಪಡಿಸುವಂತೆ ಸ್ಪೇಸ್‌ಎಕ್ಸ್‌ಗೆ ಒತ್ತಾಯಿಸಿತ್ತು. ಆ ಮೂಲಕ ನಾಲ್ಕು ಗಗನಯಾತ್ರಿಗಳ ಜೀವ ಉಳಿಸಿದ್ದೇವೆ’ ಎಂದು ನಾರಾಯಣ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.