ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಕೆ.ಶಿವನ್ ವೈಯಕ್ತಿಕ ಖಾತೆ ಹೊಂದಿಲ್ಲ: ಇಸ್ರೊ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 11:52 IST
Last Updated 9 ಸೆಪ್ಟೆಂಬರ್ 2019, 11:52 IST
   

ಬೆಂಗಳೂರು: ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವೈಯಕ್ತಿಕ ಖಾತೆಗಳನ್ನು ಹೊಂದಿಲ್ಲ ಎಂದು ಇಸ್ರೊ ಸೋಮವಾರ ಸ್ಪಷ್ಟಪಡಿಸಿದೆ.

Kailasavadivoo Sivan ಹೆಸರಿನಲ್ಲಿ ಕೆ.ಶಿವನ್ ಅವರ ಭಾವಚಿತ್ರ ಸಹಿತ ಖಾತೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಸಕ್ರಿಯವಾಗಿವೆ ಎಂಬುದನ್ನು ಗಮನಿಸಲಾಗಿದೆ. ಇಸ್ರೊ ಅಧ್ಯಕ್ಷರಾದ ಕೆ.ಶಿವನ್ ಅವರು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಯಾವುದೇ ವೈಯಕ್ತಿಕ ಖಾತೆಗಳನ್ನು ಹೊಂದಿಲ್ಲ. ಆದ್ದರಿಂದ ಅಂತಹ ಎಲ್ಲಾ ಖಾತೆಗಳ ಎಲ್ಲಾ ಮಾಹಿತಿಗಳು ಅಧಿಕೃತವಲ್ಲ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಕೊಂಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ರೊದ ಅಧಿಕೃತ ಖಾತೆಗಳು ಈ ಕೆಳಗಿನಂತಿವೆ ಎಂದೂ ತಿಳಿಸಿದೆ.

1. https://www.twitter.com/isro
2. https://www.facebook.com/ISRO
3. Youtube ISRO Official

ಟ್ವಿಟರ್‌ನಲ್ಲಿ ಶಿವನ್‌ ಅವರ ಹೆಸರಿನಲ್ಲಿರುವ ಅನಧಿಕೃತಖಾತೆಗಳು..

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.