ADVERTISEMENT

ಮಾನವಸಹಿತ ಯಾನದತ್ತ ಮತ್ತೊಂದು ಹೆಜ್ಜೆ: ಇಸ್ರೊ ಪರೀಕ್ಷೆ ನಿಖರ

ಇಸ್ರೊಗೆ ಹಿರಿಮೆ: ಗಗನಯಾನಿಯ ರಕ್ಷಣಾ ಘಟಕದ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 1:17 IST
Last Updated 6 ಜುಲೈ 2018, 1:17 IST
ಆಗಸದತ್ತ ನೆಗೆದ ಉಡಾವಣಾ ವಾಹನ
ಆಗಸದತ್ತ ನೆಗೆದ ಉಡಾವಣಾ ವಾಹನ   

ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯ ಸಿದ್ಧತೆಯಲ್ಲಿ ಇಸ್ರೊ ಇನ್ನೊಂದು ಹೆಜ್ಜೆ ಮುಂದಿರಿಸಿದೆ. ಯಾವುದೇ ತುರ್ತುಕಾರಣದಿಂದಾಗಿ ಉಡಾವಣೆಯನ್ನು ಕೈಬಿಡುವ ಸ್ಥಿತಿ ಬಂದಾಗ ಗಗನಯಾತ್ರಿಗಳು ಉಡಾವಣಾ ವಾಹನದಿಂದ ಸುರಕ್ಷಿತವಾಗಿ ಹೊರಕ್ಕೆ ಬರುವ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಇನ್ನೂ ಅನುಮತಿ ಇಲ್ಲ
ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಈಗ ಅನುಮತಿ ಕೊಟ್ಟರೆ ಯೋಜನೆ ಕಾರ್ಯರೂಪಕ್ಕೆ ಬರಲು 7ರಿಂದ 10 ವರ್ಷ ಬೇಕು. ಯೋಜನೆಗೆ ₹17 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ನಾಲ್ಕನೇ ದೇಶ
ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮವನ್ನು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈವರೆಗೆ ನಡೆಸಿವೆ. ಈ ಕಾರ್ಯಕ್ರಮದಲ್ಲಿ ಭಾರತ ಯಶಸ್ವಿಯಾದರೆ ಜಗತ್ತಿನ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದೊರೆಯಲಿದೆ.

ADVERTISEMENT

* ಬೆಳಿಗ್ಗೆ 7.00 ಗಂಟೆಗೆ ಪರೀಕ್ಷಾ ವಾಹನ ಉಡಾವಣೆ

* ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಪರೀಕ್ಷೆ

‌* 1,260 -ಕಿಲೋ ತೂಕ ಹೊತ್ತ ವಾಹನ ಉಡ್ಡಯನ

* 259 -ಸೆಕೆಂಡ್‌ ಪರೀಕ್ಷೆಗೆ ತಗಲಿದ ಸಮಯ

* ಗಗನಯಾನಿ ರಕ್ಷಣಾ ಘಟಕವನ್ನು ಹೊತ್ತ ಉಡಾವಣಾ ವಾಹನ 2.7 ಕಿ.ಮೀ ಎತ್ತರ ತಲುಪಿತು

* ರಕ್ಷಣಾ ಘಟಕವು ವಾಹನದಿಂದ ಬೇರ್ಪಟ್ಟು ಬಂಗಾಳ ಕೊಲ್ಲಿಯತ್ತ ವಾಲಿತು

* ಘಟಕದಲ್ಲಿ ಅಳವಡಿಸಿದ್ದ ಪ್ಯಾರಾಚೂಟ್‌ ಬಿಚ್ಚಿಕೊಂಡಿತು. ಘಟಕವು ತೇಲಾಡುತ್ತಾ ಬಂಗಾಳ ಕೊಲ್ಲಿಯಲ್ಲಿ ಬಿತ್ತು

* ಶ್ರೀಹರಿಕೋಟಾದಿಂದ 2.9 ಕಿ.ಮೀ. ದೂರದಲ್ಲಿ ನಿಗದಿತ ಸ್ಥಳದಲ್ಲಿಯೇ ಈ ಘಟಕ ನೆಲೆಯಾಯಿತು

* 3 - ಘಟಕವನ್ನು ಗುರುತಿಸಿ ವಾಪಸ್‌ ತರುವುದಕ್ಕಾಗಿ ನಿಯೋಜಿಸಲಾಗಿದ್ದ ನೌಕೆಗಳು

* 300- ಪರೀಕ್ಷಾರ್ಥದ ಹಾರಾಟದ ಮಾಹಿತಿ ಸಂಗ್ರಹಕ್ಕಾಗಿ ಅಳವಡಿಸಲಾಗಿದ್ದ ಸೆನ್ಸರ್‌ಗಳ ಸಂಖ್ಯೆ

*


*


ಪ್ಯಾರಾಚೂಟ್‌ ಮೂಲಕ ನೆಲದತ್ತ ಧಾವಿಸಿದ ಗಗನಯಾನಿ ರಕ್ಷಣಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.